ಸುಪ್ರೀಂಕೋರ್ಟ್ ಪಂಚಪೀಠದಲ್ಲಿ ತ್ರಿವಳಿ ತಲಾಖ್ ವಿಚಾರಣೆ

ಗುರುವಾರ, 11 ಮೇ 2017 (11:19 IST)
ತ್ರಿವಳಿ ತಲಾಕ್`ಗೆ ಸಾಂವಿಧಾನಿಕ ಮಾನ್ಯತೆ ಕುರಿತಂತೆ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.  ಮುಖ್ಯ ನ್ಯಾಯಮೂರ್ತಿ ಖೇಹರ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಪಂಚ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.

ಈ ಹಿಂದೆಯೇ ತಿಳಿಸಿದಂತೆ ಇಂದಿನಿಂದ ಸುಪ್ರೀಂಕೋರ್ಟ್ ಬೇಸಿಗೆ ರಜೆ ಆರಂಭವಾಗಲಿದ್ದು, ಬೇಸಿಗೆ ರಜಾಕಾಲದಲ್ಲೇ ವಿಚಾರಣೆ ನಡೆಯುತ್ತಿದೆ. ತ್ರಿವಳಿ ತಲಾಖ್ ವಿರುದ್ಧವಾಗಿ ದೇಶಾದ್ಯಂತ ಹಲವು ಅರ್ಜಿಗಳು ಬಂದಿದ್ದು, ಪ್ರತ್ಯೇಕವಾಗಿ ವಿಚಾರಣೆ ನಡೆಸುವ ಬದಲು ತಲಾಖ್  ಸಾಂವಿಧಾನಿಕ ಮಾನ್ಯತೆ ಬಗ್ಗೆಯೇ  ಒಟ್ಟೊಟ್ಟಿಗೆ ಅರ್ಜಿಗಳ ವಿಚಾರಣೆ ನಡೆಸಲೂ ಕೋರ್ಟ್ ನಿರ್ಧರಿಸಿದೆ.
ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರನ್ನ ಸಲಹೆಗಾರರನ್ನಾಗಿ ಸುಪ್ರೀಂಕೋರ್ಟ್ ನೇಮಿಸಿಕೊಂಡಿದೆ.

ಪಂಚಪೀಠದಲ್ಲಿರುವ ಐವರೂ ನ್ಯಾಯಾಧೀಶರು 5 ಧರ್ಮಗೀಲಿಗೆ ಸೇರಿದವರಾಗಿರುವುದು ವಿಶೇಷ. ಮುಖ್ಯ ನ್ಯಾಯಾಮೂರ್ತಿ ಕೆ.ಎಸ್. ಖೇಹರ್(ಸಿಖ್), ಜಸ್ಟೀಸ್ ಕುರಿಯನ್ ಜೋಸೆಫ್(ಕ್ರಿಶ್ಚಿಯನ್), ಅಬ್ದುಲ್ ನಜೀರ್(ಮುಸ್ಲಿಂ) ಜಸ್ಟೀಸ್ ರೋಹಿಂಟನ್ ನಾರಿಮನ್(ಪಾರ್ಸಿ), ಜಸ್ಟಿಸ್ ಉದಯ್ ಲಲಿತ್(ಹಿಂದೂ) ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ