ಯಾಕೂಬ್ ಮೆಮೋನ್‌ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರೆಲ್ಲಾ ಉಗ್ರರಾಗಿರಬಹುದು: ತ್ರಿಪುರಾ ರಾಜ್ಯಪಾಲ

ಶುಕ್ರವಾರ, 31 ಜುಲೈ 2015 (18:51 IST)
ಮುಂಬೈ ಸ್ಫೋಟದ ಉಗ್ರ ಯಾಕೂಬ್ ಮೆಮೋನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರೆಲ್ಲಾ ಉಗ್ರರಾಗಿರಬಹುದು ಎಂದು ತ್ರಿಪುರಾ ರಾಜ್ಯಪಾಲ ತಾಠಾಗಾಟಾ ರಾಯ್ ಹೇಳಿದ್ದಾರೆ.
 
ಯಾಕೂಬ್ ಮೆಮನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರ ಮೇಲೆ ಗುಪ್ತಚರ ದಳದ ಅಧಿಕಾರಿಗಳು ಒಂದು ಕಣ್ಣಿಟ್ಟಿರಬೇಕು. ಅವರು ಉಗ್ರರಾಗಿರಬಹುದು ಎಂದು ಟ್ವೀಟ್ ಮಾಡಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ವೆಬ್ಬಿಸಿದೆ.
 
ಟ್ವೀಟ್ ಸಂದೇಶ ವಿವಾದಾತ್ಮಕ ಸ್ವರೂಪ ಪಡೆದ ನಂತರ ರಾಜ್ಯಪಾಲರು, ನನಗೆ ಕೇವಲ ನಾಗರಿಕರ ಸುರಕ್ಷತೆಯ ಬಗ್ಗೆ ಕಾಳಜಿಯಿಂದ ಹಾಗೇ ಮಾಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.  
 
ಗುಪ್ತಚರ ದಳದ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರ ಮೇಲೆ ಕಣ್ಣಿಡಲಿ ಎಂದು ಹೇಳಿದ್ದೇನೆ. ಆದ್ದರಿಂದ ನಾನು ಹೇಗೆ ಕೋಮುವಾದಿಯಾಗುತ್ತೇನೆ? ತಪ್ಪು ಮಾತನಾಡಿದ್ರೆ ಅಪರಾಧಿ ಭಾವನೆ ಕಾಡುತ್ತದೆ ಎಂದು ಉಲ್ಟಾ ಹೊಡೆದಿದ್ದಾರೆ.
 
ಕೆಲ ವಿಷಯಗಳನ್ನು ಸಾರ್ವಜನಿಕರ ಮುಂದಿಡುವುದು ನನ್ನ ಕರ್ತವ್ಯವಾಗಿದೆ. ರಾಜ್ಯಪಾಲನಾಗಿ ನನ್ನ ಕರ್ತವ್ಯದಿಂದ ವಿಣುಕನಾಗಲು ಸಾಧ್ಯವಿಲ್ಲ. ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ತಪ್ಪುಗಳನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ. ಆದರೆ, ಅವರ ಭಾವನೆಯಂತೆ ನಾನು ಹೇಳಿಕೆ ನೀಡಿಲ್ಲ ಎಂದರು.
 
ತಾಠಾಗಾಟಾ ರಾಯ್ 2002ರಿಂದ 2006ರವರೆಗೆ ಬಂಗಾಳದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 2002ರಿಂದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದ0ಸ್ಯರೂ ಕೂಡಾ ಆಗಿದ್ದು, ಮೇ 2015 ರಿಂದ ತ್ರಿಪುರಾ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ