ಜಿಲ್ಲಾಧಿಕಾರಿ ಜತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಕ್ಕೆ ಯುವಕನ ಬಂಧನ

ಶುಕ್ರವಾರ, 5 ಫೆಬ್ರವರಿ 2016 (16:22 IST)
ಇಂದಿನ ಯುವಜನಾಂಗಕ್ಕೆ ಸಿಕ್ಕಾಪಟ್ಟೆ ಸೆಲ್ಫಿ ಕ್ರೇಜ್. ಸೆಲ್ಫಿಗಾಗಿ ಎಂತಹ ಸಾಹಸಕ್ಕಾಗಿಯಾದರೂ ಕೈ ಹಾಕುತ್ತಾರೆ ಅವರು. ಉತ್ತರ ಪ್ರದೇಶದ 18 ವರ್ಷದ ಫರಾದ್ ಅಹಮದ್‌ಗೂ ತನ್ನ ವಯಸ್ಸಿನವರಂತೆ ಈ ಸೆಲ್ಫಿ ಗೀಳು. ಆದರೆ ಈ ಹುಚ್ಚೇ ತನ್ನನ್ನು ಜೈಲಿಗೆ ಕಳುಹಿಸುತ್ತೆ ಎಂದಂತೂ ಆತ ಕನಸಲ್ಲೂ ನೆನಸಿರಲಿಕ್ಕಿಲ್ಲ.

ಬುಲಂದ್ ಶಹ್ರ್ ಜಿಲ್ಲೆಯ ಕಮಲ್ ಪುರ್ ಗ್ರಾಮದ ನಿವಾಸಿ ಫರಾದ್ ಅಹ್ಮದ್ ಜಿಲ್ಲಾಧಿಕಾರಿ ಬಿ. ಚಂದ್ರಕಲಾ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದಕ್ಕೆ ಹೋಗಿದ್ದ. ವೇದಿಕೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಜಿಲ್ಲಾಧಿಕಾರಿ ಅಹ್ಮದ್ ಪಕ್ಕ ನಿಂತು ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ.ಫೋಟೋ ತೆಗೆಯಬೇಡ. ಅದಕ್ಕೆ ಮೊದಲೆ ಮುಂಚೆಯೇ ಅನುಮತಿ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ  ಎಚ್ಚರಿಕೆ ನೀಡಿದರೂ ಅತ್ಯುತ್ಸಾಹದಲ್ಲಿದ್ದ ಹುಡುಗ ಅದಕ್ಕೆ ಕ್ಯಾರೆ ಅನ್ನಲಿಲ್ಲ. ಆತ ಪೋಟೋ ತೆಗೆಯುವುದನ್ನು ಮುಂದುವರೆಸಿದ.

ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ಪಡೆಯದೆ ಅವರ ಜೊತೆ ಸೆಲ್ಫಿ ತೆಗೆದುಕೊಂಡದ್ದಕ್ಕಾಗಿ ಆತನನ್ನು ಬಂಧಿಸಿದ ಪೊಲೀಸರು ಮೂರು ದಿನ ಜೈಲಿನಲ್ಲಿಟ್ಟಿದ್ದರು. ಈಗ ಆತ ಜಾಮೀನಿನ ಮೇಲೆ ಹೊರ ಬಂದಿದ್ದಾನೆ.
 
ಈ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಚಂದ್ರಕಲಾರವರು ತಾವು ಕೇವಲ ಜಿಲ್ಲಾಧಿಕಾರಿಯಷ್ಟೇ ಅಲ್ಲ, ಅದನ್ನು ಹೊರತು ಪಡಿಸಿ ಒಬ್ಬ ಮಹಿಳೆ. ಮಹಿಳೆಯ ಘನತೆಗೆ ಎಲ್ಲರೂ ಗೌರವ ನೀಡಬೇಕು ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ