ಮಹಾತ್ಮ ಗಾಂಧಿ ಕುರಿತ ಆಕ್ಷೇಪಾರ್ಹ ವಿಡಿಯೋ ಪೋಸ್ಟ್: ಇಬ್ಬರ ಬಂಧನ

ಶನಿವಾರ, 29 ಆಗಸ್ಟ್ 2015 (16:26 IST)
ಫೇಸ್‌ಬುಕ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಕುರಿತ ಆಕ್ಷೇಪಾರ್ಹ ವಿಡಿಯೋ ಪೋಸ್ಟ್ ಮಾಡಿದ ಆರೋಪದ ಮೇಲೆ ಛತ್ತೀಸ್‌ಗಡ್ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. 

ರಾಜ್ಯದ ಸಾಮಾಜಿಕ ಮಾಧ್ಯಮದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರುಪ್  ಅಡ್ಮಿನ್  ಮನೀಶ್ ಜೈಸ್ವಾಲ್ ಮತ್ತು ಮತ್ತೊಬ್ಬ ಯುವಕ ಆಯುಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
 
ಅವರ ವಿರುದ್ಧ ಐಪಿಸಿ ವಿಭಾಗ 153 ಎ, ಬಿ ಮತ್ತು ಐಟಿ ಕಾಯಿದೆ 404ರ ಪ್ರಕಾರ ಪ್ರಕರಣ ದಾಖಲಾಗಿದೆ. 
 
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಗ್ರುಪ್ ಎಡ್ಮಿನ್ ಮನೀಶ್ ಮಹಾತ್ಮಾಗಾಂಧಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ವಿಡಿಯೋವನ್ನು ಪ್ರಕಟಿಸಿದ ಮತ್ತು ಗ್ರುಪ್ ಸದಸ್ಯ ಆಯುಶ್ ಅದನ್ನು ಹಂಚಿಕೊಂಡಿದ್ದಾನೆ. ಆದರೆ ಅದೇ ಗ್ರುಪ್‌ನಲ್ಲಿದ್ದ ಪ್ರದೀಪ್ ಸಿಂಗ್ ಠಾಕೂರ್ ಈ ಕುರಿತು ಪೊಲೀಸರಲ್ಲಿ ದೂರು ನೀಡಿದ್ದಾರೆ. 
 
ಆದರೆ ಬಂಧನದ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ಷೇಪ ಕೇಳಿಬಂದಿದೆ. 'ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಿದು'' ಹಿರಿಯ ಪತ್ರಕರ್ತ ಅಲೋಕ್  ಪುತಾಲ್ ಆಕ್ರೋಶವ್ಯಕ್ತ ಪಡಿಸಿದ್ದಾರೆ. 
 
'ಇದು ಬ್ರಿಟಿಷ್ ಕಾಲದ ಲಾರ್ಡ್ ಲಿಟ್ಟನ್‌ನ 'ಕಡಿವಾಣ ಹಾಕುವ ಆಕ್ಟ್'ನ್ನು ನೆನಪಿಸುತ್ತದೆ', ಪ್ರಮುಖ ಇಂಗ್ಲೀಷ್ ದೈನಿಕದ ಸಂಪಾದಕ ಕೆ. ಎನ್. ಕಿಶೋರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ