ತಿಹಾರ್: ಸುರಂಗ ಕೊರೆದು ಪರಾರಿಯಾದ ಕೈದಿಗಳು

ಸೋಮವಾರ, 29 ಜೂನ್ 2015 (09:47 IST)
ನವದೆಹಲಿಯ ತಿಹಾರ್ ಜೈಲಿನಲ್ಲಿ ಸುರಂಗ ಕೊರೆದು ಇಬ್ಬರು ಕೈದಿಗಳು ಪರಾರಿಯಾದ ಘಟನೆ ರವಿವಾರ ನಡೆದಿದೆ. 

ಈ ಮೊದಲ ಎರಡು ಬಾರಿಗೆ ಕುಖ್ಯಾತ ಕೈದಿಗಳು ಈ ಜೈಲಿನಿಂದ ತಪ್ಪಿಸಿಕೊಂಡಿದ್ದರು. ಆದರೆ ತಿಹಾರ್ ಜೈಲಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೈದಿಗಳು ಸುರಂಗ ಕೊರೆದು ಪರಾರಿಯಾಗಿದ್ದಾರೆ. 
 
1986ರಲ್ಲಿ ಚಾರ್ಲ್ಸ್ ಶೋಭರಾಜ್ ಮತ್ತು 2004ರಲ್ಲಿ ಪೂಲನ್ ದೇವಿ ಹಂತಕ ಶೇರ್‌ಸಿಂಗ್ ರಾಣಾ ತಿಹಾರ್ ಜೈಲಿನಿಂದ ತಪ್ಪಿಸಿಕೊಂಡಿದ್ದರು. 
 
11 ವರ್ಷಗಳ ಬಳಿಕ ಘಟನೆ ಮರುಕಳಿಸಿದ್ದು ಇವರು ತಿಹಾರ್ ಜೈಲಿನ 7ನೇ ಬ್ಲಾಕ್‌ನ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಜೈಲು ಅಧಿಕಾರಿಗಳು ರೋಲ್ ಕಾಲ್ ಕರೆಯುತ್ತ ಬಂದಾಗ ಆರೋಪಿಗಳಿಬ್ಬರು ಉತ್ತರಿಸದಿದ್ದುದು ಕಂಡು ಬಂದಿದೆ. ನಂತರ ಪರಿಶೀಲಿಸಿದಾಗ ಆರೋಪಿಗಳಿಬ್ಬರು ಸುರಂಗ ಕೊರೆದು ಪರಾರಿಯಾಗಿರುವುದು ತಿಳಿದು ಬಂದಿದೆ. ಪೊಲೀಸರು ತಕ್ಷಣ ಕಾರ್ಯಾಚರಣೆಗಿಳಿದಿದ್ದಾರೆ. 
 
ದೃಢಪಟ್ಟಿಲ್ಲದ ವರದಿಗಳ ಪ್ರಕಾರ ಪರಾರಿಯಾಗಿದ್ದವರಲ್ಲಿ ಒರ್ವನನ್ನು ಬಂಧಿಸಲಾಗಿದ್ದು ಬಹಳ ಅಪಾಯಕಾರಿಯಾದ ಮತ್ತೊಬ್ಬನಿಗಾಗಿ ಶೋಧ ನಡೆದಿದೆ.  

ವೆಬ್ದುನಿಯಾವನ್ನು ಓದಿ