ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಮುಂಬೈ ಲೋಕಲ್ ಟ್ರೇನ್‌ ಬ್ರೆಕ್ ವೈಪಲ್ಯಕ್ಕೆ ಕೆಂಪು ಇರುವೆಗಳು ಕಾರಣವಂತೆ..!

ಶುಕ್ರವಾರ, 20 ನವೆಂಬರ್ 2015 (16:16 IST)
ನಗರದ ಸೆಂಟ್ರಲ್‌ ಲೈನ್‌ನಲ್ಲಿ ನವೆಂಬರ್ 17 ರಂದು ಎದುರಾದ ಲೋಕಲ್ ಟ್ರೇನ್ ಬ್ರೆಕ್ ವೈಫಲ್ಯಕ್ಕೆ ಕೆಂಪು ಇರುವೆಗಳು ಕಾರಣವೆಂದು ತನಿಖಾಧಿಕಾರಿಗಳು ಹೇಳಿದ್ದಾರೆ. 
 
ಇದೀಗ, ತನಿಖೆಯ ವರದಿ ಪ್ರಕಾರ ಬ್ರೆಕ್ ವೈಫಲ್ಯಕ್ಕೆ ಕೆಂಪು ಇರುವೆಗಳೇ ಕಾರಣ ಎಂದು ತನಿಖಾ ಮೂಲಗಳು ತಿಳಿಸಿವೆ.
 
ಮಾಧ್ಯಮಗಳ ವರದಿಗಳ  ಪ್ರಕಾರ, ಕೆಂಪು ಇರುವೆಗಳಿಂದಾಗಿ ಬ್ರೆಕ್ ಪ್ಯಾನಲ್‌ನಲ್ಲಿ ಉಂಟಾದ ತುಕ್ಕಿನಿಂದಾಗಿ ಬ್ರೆಕ್ ವೈಫಲ್ಯವಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಪರೀಕ್ಷೆಗಾಗಿ ರೈಲನ್ನು ಕುರ್ಲಾ ಕಾರ್ ಶೆಡ್‌‌ಗೆ ತೆಗೆದುಕೊಂಡು ಹೋಗಲಾಗಿತ್ತು ಎಂದು ಹೇಳಿದ್ದಾರೆ.
 
ತನಿಖಾ ಸಂದರ್ಭದಲ್ಲಿ ಬ್ರೆಕ್ ಪ್ಯಾನೆಲ್‌ನೊಳಗಿದ್ದ ಇರುವೆಗಳು, ಕೇಬಲ್ ವೈರ್‌ಗಳನ್ನು ನಾಶಪಡಿಸಿದ್ದರಿಂದ ಬ್ರೆಕ್ ವೈಫಲ್ಯಕ್ಕೆ ಕಾರಣವಾಗಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.     
 
ಲೋಕಲ್ ಟ್ರೇನ್ ಚಾಲಕ ಬ್ರೆಕ್ ವೈಫಲ್ಯವನ್ನು ಗಮನಿಸಿ ತುರ್ತುಬ್ರೆಕ್‌ ಅದುಮಿದಾಗ ಘೋರ ಅಪಘಾತ ತಪ್ಪಿದಂತಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ