ಅರುಣಾಚಲ್ ಪ್ರದೇಶದಲ್ಲಿ ರಾಷ್ಟ್ರಪತಿ ಅಡಳಿತ ಹಿಂಪಡೆಯಲು ಕೇಂದ ಸರಕಾರ ನಿರ್ಧಾರ

ಬುಧವಾರ, 17 ಫೆಬ್ರವರಿ 2016 (15:10 IST)
ಅರುಣಾಚಲ ಪ್ರದೇಶದಲ್ಲಿ ನೂತನ ಸರಕಾರ ಪ್ರಮಾಣ ವಚನ ಸ್ವೀಕರಿಸುವುದು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟ ಆದೇಶ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ರಾಷ್ಟ್ರಪತಿ ಅಡಳಿತ ಶಿಫಾರಸ್ಸು ಹಿಂಪಡೆಯಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
 
ಕಾಂಗ್ರೆಸ್ ಪಕ್ಷದ ಭಿನ್ನಮತಿಯ ನಾಯಕ ಕಲಿಖೋ ಪೌಲ್ ಫೆಬ್ರವರಿ 15 ರಂದು ರಾಜ್ಯಪಾಲ ಜ್ಯೋತಿಪ್ರಸಾದ್ ರಾಜ್‌ಖೋವಾ ಅವರನ್ನು ಭೇಟಿ ಮಾಡಿ ಸರಕಾರ ರಚಿಸಲು ಅಗತ್ಯವಿರುವ ಶಾಸಕರ ಬೆಂಬಲವಿರುವುದಾಗಿ ಹೇಳಿದ್ದರಿಂದ ಕೇಂದ್ರ ಸರಕಾರ ರಾಜ್ಯಪಾಲರ ವರದಿಗಾಗಿ ನಿರೀಕ್ಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
 
18 ಕಾಂಗ್ರೆಸ್ ಶಾಸಕರು, 11 ಬಿಜೆಪಿ ಶಾಸಕರು ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳ ಬೆಂಬಲಿವಿದೆ ಎಂದು ಪೌಲ್ ಘೋಷಿಸಿದ್ದಾರೆ.
 
ಮಾಜಿ ಮುಖ್ಯಮಂತ್ರಿ ನಬಾಮ್ ಟುಕಿಯವರಿಗೆ ಬಹುಮತವಿದ್ದರೂ ಭಿನ್ನಮತೀಯ ಕಾಂಗ್ರೆಸ್ ಶಾಸಕನನ್ನು ಮುಖ್ಯಮಂತ್ರಿಯಾಗಿಸು ಹುನ್ನಾರವನ್ನು ರಾಜ್ಯಪಾಲರು ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೇಂದ್ರ ಸರಕಾರದ ಯಾವುದೇ ಶಿಫಾರಸ್ಸು ಒಪ್ಪಬಾರದು ಎಂದು ಕಾಂಗ್ರೆಸ್ ಮನವಿ ಮಾಡಿದೆ.
 
ಉಪಸಭಾಪತಿ ಟಿ.ನೊರ್ಬು ಥಾಂಡೋಕ್, ಭಿನ್ನಮತೀಯ ಕಾಂಗ್ರೆಸ್ ನಾಯಕ ನೆಬಿಯಾ ಸೇರಿದಂತೆ 14 ಶಾಸಕರ ಅಮಾನತ್ತು ರದ್ದುಗೊಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ