ಉತ್ತರ ಪ್ರದೇಶ ಸಿಎಂ ಯೋಗಿ ಮುಸ್ಲಿಮರ ವಿಷಯದಲ್ಲಿ ಕೈಗೊಂಡ ಮಹತ್ವದ ನಿರ್ಧಾರ!

ಶುಕ್ರವಾರ, 14 ಏಪ್ರಿಲ್ 2017 (08:30 IST)
ಲಕ್ನೋ: ಉತ್ತರ ಪ್ರದೇಶ ಸಿಎಂ ಪಕ್ಕಾ ಹಿಂದುವಾದಿ ಎಂದು ಅವರು ಅಧಿಕಾರ ಸ್ವೀಕರಿಸಿದಾಗಲೇ ಆರೋಪಗಳಿತ್ತು. ಆದರೆ ಇದೀಗ ಸಿಎಂ ಯೋಗಿ ಬಡ ಮುಸ್ಲಿಮರ ಸರ್ಕಾರಿ ಪ್ರಾಯೋಜಿತ ಸಾಮೂಹಿಕ ವಿವಾಹಕ್ಕೆ ಸಿಎಂ ಯೋಗಿ ಪೌರೋಹಿತ್ಯ ವಹಿಸಲಿದ್ದಾರೆ.

 

ಇದೊಂದು ಮಹತ್ವದ ನಿರ್ಧಾರವಾಗಿದೆ. ಆದರೆ ಸಿಎಂ ಯೋಗಿ ಸಾಮೂಹಿಕ ವಿವಾಹವನ್ನು ಸರ್ಕಾರದ ಕಾರ್ಯಕ್ರಮವಾಗಿ ಹಮ್ಮಿಕೊಳ್ಳುವುದಲ್ಲದೆ, ಬಡ ಮುಸ್ಲಿಂ ಯುವತಿಯರಿಗೆ ವಿವಾಹಕ್ಕೆಂದು 20 ಸಾವಿರ ರೂ. ನೀಡಲಿದ್ದಾರೆ. ಯೋಗಿ ಆದಿತ್ಯನಾಥ್ ರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

 
ಈ ಕುರಿತಾದ ಮಸೂದೆಯೊಂದಕ್ಕೆ ಸಿದ್ಧತೆ ನಡೆಸುತ್ತಿರುವುದಾಗಿ ರಾಜ್ಯ ಅಲ್ಪಸಂಖ್ಯಾತ ಸಚಿವ ಮೊಹ್ಸಿನ್ ರಾಜಾ ಹೇಳಿದ್ದಾರೆ. ಈ ಮೂಲಕ ತಾನು ಮುಸ್ಲಿಂ ವಿರೋಧಿ ಮುಖ್ಯಮಂತ್ರಿಯಲ್ಲ ಎಂದು ಯೋಗಿ ಸಾಬೀತು ಮಾಡಲು ಹೊರಟಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ