ಮುಸ್ಲಿಂ, ಹಿಂದೂಗಳ ಜಂಟಿ ತೀರ್ಥಯಾತ್ರೆಗೆ ಅಖಿಲೇಶ್ ಸರಕಾರ ಯೋಜನೆ

ಶುಕ್ರವಾರ, 26 ಜೂನ್ 2015 (15:37 IST)
ಉತ್ತರಪ್ರದೇಶ ಸರಕಾರ ಹಿಂದು ಮತ್ತು ಮುಸ್ಲಿಮರನ್ನು ಜಂಟಿಯಾಗಿ ತೀರ್ಥಯಾತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
 
ಘರ್ಮಾರ್ಥ ಕಾರ್ಯ ಇಲಾಖೆ ಸರಕಾರಿ ಆದೇಶವೊಂದನ್ನು ಹೊರಡಿಸಿದ್ದು, ಪ್ರತಿಯೊಂದು ಜಿಲ್ಲೆಯಿಂದ 10 ಮುಸ್ಲಿಮರು ಮತ್ತು 10 ಹಿಂದುಗಳನ್ನು ಪುಷ್ಕರ್ ಮತ್ತು ರಾಜಸ್ಥಾನದ ಅಜ್ಮೇರ್ ಶರೀಷ್‌ಗೆ ತೀರ್ಥಯಾತ್ರೆಗಾಗಿ ಕರೆದುಕೊಂಡು ಹೋಗಲು ನಿರ್ಧರಿಸಿದೆ. 
 
ಪುಷ್ಕರ್ ಹಿಂದುಗಳಿಗೆ ಪವಿತ್ರ ಯಾತ್ರಾ ಸ್ಥಳವಾಗಿದ್ದರೆ, ಅಜ್ಮೇರ್ ಶರೀಷ್‌ ದರ್ಗಾಕ್ಕೆ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದವರು ಭೇಟಿ ನೀಡುತ್ತಾರೆ.
 
ಧಾರ್ಮಿಕ ಕಾರ್ಯಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವನೀತ್ ಸೆಹಗಲ್ ಮಾತನಾಡಿ, ಉತ್ತರಪ್ರದೇಶದ 75 ಜಿಲ್ಲೆಗಳಲ್ಲಿ ಯಾತ್ರೆಗಾಗಿ ಅರ್ಜಿಗಳು ಬಂದಿದ್ದು, ಅರ್ಜಿಗಳ ಪರಿಶೀಲನೆ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದ್ದಾರೆ. 
 
ಉತ್ತರಪ್ರದೇಶದ ನಿವಾಸಿಗಳಿಗೆ ಉತ್ತಮ ಪ್ರವಾಸ ಸೌಲಭ್ಯಗಳನ್ನು ನೀಡುವುದಷ್ಟೆ ಅಲ್ಲ. ಕೋಮು ಸೌಹಾರ್ದತೆಯ ಸಂದೇಶ ಸಾರುವ ಯೋಚನೆಯಾಗಿದೆ ಎಂಮದು ಹೇಳಿದ್ದಾರೆ.
 
ರಾಜ್ಯ ಸರಕಾರದ ಸಮಾಜವಾದಿ ಶ್ರಾವಣ್ ಯಾತ್ರೆಯ ಅಂಗವಾಗಿ ಆಯೋಜಿಸಲಾದ ಪ್ರವಾಸಕ್ಕೆ ಐಆರ್‌ಸಿಟಿಸಿ ಕೂಡಾ ಸಹಯೋಗ ನೀಡಲಿದೆ. ಯಾತ್ರೆಗಾಗಿ ವಿಶೇಷ ರೈಲಿನಲ್ಲಿ 1044 ಬರ್ತ್‌ಗಳನ್ನು ಬುಕ್ ಮಾಡಲಾಗಿದೆ ಎಂದು ವಿವರಿಸಿದ್ದಾರೆ. 
 
ಮುಂಬರುವ ಜುಲೈ 23 ರಿಂದ ಪ್ರವಾಸ ಆರಂಭವಾಗಲಿದ್ದು, ಸೂಕ್ತ ಸಮಯದಲ್ಲಿ ಯಾವುದೇ ತೊಡಕಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಧಾರ್ಮಿಕ ಕಾರ್ಯಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವನೀತ್ ಸೆಹಗಲ್ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ