ಮೂತ್ರ ಡೆಟಾಲ್‌ನಂತೆ ಪರಿಣಾಮಕಾರಿ ಮದ್ದು: ಲಾಲು ಪ್ರಸಾದ್

ಸೋಮವಾರ, 1 ಫೆಬ್ರವರಿ 2016 (15:47 IST)
ಮೂತ್ರ ಡೆಟಾಲ್‌ನಂತೆ ಪರಿಣಾಮ ಬೀರುವ ಅತ್ಯಂತ ಪ್ರಯೋಜನಕಾರಿ ಔಷಧಿ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ. 



ರಾಷ್ಟ್ರೀಯ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಹೋಮಿಯೋಪತಿ ವಿಜ್ಞಾನ ಕಾಂಗ್ರೆಸ್ ಪಾಟ್ಣಾದಲ್ಲಿ ಆಯೋಜಿಸಲಾಗಿದ್ದ 'ವಿಭಿನ್ನ ರೀತಿಯ ರೋಗಗಳು ಮತ್ತು ಹೋಮಿಯೋಪತಿಯ ಸರಳತೆ' ಎಂಬ ವಿಷಯದ ಬಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಾಲು ಮಾತನಾಡುತ್ತಿದ್ದರು. 
 
ನಾನು ಮಗುವಾಗಿದ್ದಾಗ ಗಾಯವಾಗಿದ್ದಾಗಲೆಲ್ಲ ಮೂತ್ರವೇ ಅತ್ಯುತ್ತಮ ಔಷಧಿಯಾಗಿತ್ತು. ಇದು ಆಂಟಿ ಸೆಫ್ಟಿಕ್(ನಂಜು ನಿರೋಧಕ) ಆಗಿ ಕಾರ್ಯ ನಿರ್ವಹಿಸುತ್ತಿತ್ತು. ಈಗ ಜನರು ಡೆಟಾಲ್ ಬಳಸುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ನಾವು ಸಾಧಿಸಿರುವ ಪ್ರಗತಿ ಇದೊಂದೆ ಎಂದು ಲಾಲು ತಿಳಿಸಿದ್ದಾರೆ
 
ಯಾವುದೇ ಔಷಧಿ ಇಲ್ಲದೇ ರೋಗಗಳನ್ನು ಗುಣಪಡಿಸುವ ಚಿಕಿತ್ಸಾ ವಿಧಾನ ಎಂದರೆ ಹೋಮಿಯೋಪತಿ ಮಾತ್ರ.  ಅಲೋಪತಿ ಚಿಕಿತ್ಸಾ ಶಸ್ತ್ರಚಿಕಿತ್ಸೆಯಲ್ಲಿ ನಂಬಿಕೆ ಇಡುತ್ತದೆ ಎಂದು ಲಾಲು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ