ಹೊಸ ಭರವಸೆಗಳೊಂದಿಗೆ ಭಾರತಕ್ಕೆ ಬಂದಿಳಿದ ಜಾನ್ ಕೆರ್ರಿ

ಗುರುವಾರ, 31 ಜುಲೈ 2014 (08:48 IST)
ಭಾರತದ ಜತೆ ಹೊಸ ಬಾಂಧವ್ಯ ಸ್ಥಾಪಿಸ ಬಯಸಿರುವ ಅಮೆರಿಕಾದ ಆಶಯಕ್ಕೆ  ಪೂರ್ವಭಾವಿಯಾಗಿ, ಅಲ್ಲಿನ ವಿದೇಶಾಂಗ ಸಚಿವ ಜಾನ್ ಕೆರ್ರಿ  ಬುಧವಾರ ರಾಜಧಾನಿ ನವದೆಹಲಿಯನ್ನು ತಲುಪಿದ್ದಾರೆ. 

ಕಳೆದ ಎರಡು ದಿನಗಳ ಹಿಂದೆ ಅಮೇರಿಕನ್ ಪ್ರಗತಿ ಕೇಂದ್ರದ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಕೆರ್ರಿ ನರೇಂದ್ರ ಮೋದಿಯವರ ''ಎಲ್ಲರ ಜತೆಗೆ, ಎಲ್ಲರ ವಿಕಾಸ' ಮಹಾನ್ ಪರಿಕಲ್ಪನೆಯಾಗಿದೆ  ಬಣ್ಣಿಸಿದ್ದರು.
 
ಅಲ್ಲದೇ ಭಾರತದೊಂದಿಗಿನ ಅಮೇರಿಕಾದ 'ಸಂಬಂಧ  21 ನೇ ಶತಮಾನದ ದಿಕ್ಕನ್ನು ನಿರ್ಧರಿಸುವಲ್ಲಿ ಮಹತ್ವದ ಪರಿಣಾಮ ಬೀರಲಿದೆ.ಭಾರತ-ಅಮೇರಿಕಾ ಸಂಬಂಧಗಳು ಒಟ್ಟಿಗೆ ಅರಳಬೇಕಿದೆ.ಅಮೇರಿಕಾದ ಮತ್ತು ಭಾರತ ಮತ್ತು 21 ನೇ ಶತಮಾನದ ಅನಿವಾರ್ಯ ಪಾಲುದಾರರಾಗದ ಅನಿವಾರ್ಯತೆ ಇದೆ ಎಂದಿದ್ದರು. 
 
ಅಲ್ಲದೇ ''ಹವಾಮಾನ ಬದಲಾವಣೆ, ಶುದ್ಧ ಶಕ್ತಿ ಇವೇ ಮುಂತಾದ ಜಾಗತಿಕ  ಸವಾಲುಗಳನ್ನು ನಿಭಾಯಿಸಲು ಎರಡು ದೇಶಗಳು ಒಟ್ಟಿಗೆ ಕಾರ್ಯನಿರ್ವಹಿಸಬೇಕು" ಎಂದು ಅವರು ಆಶಿಸಿದ್ದರು.
 
ಈ ನಿಟ್ಟಿನಲ್ಲಿ ಅವರ ಭಾರತ ಭೇಟಿ ಕುತೂಹಲ ಕೆರಳಿಸಿದ್ದು ಗುರುವಾರ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲಿರುವ ಅವರು ಹಲವು ಸುತ್ತಿನ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ಉಭಯ ದೇಶಗಳ ರಚನಾತ್ಮಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವ ನಿರೀಕ್ಷೆ ಇದೆ. 
 
ಮುಂಬರುವ ಸೆಪ್ಟೆಂಬರ್‌ನಲ್ಲಿ  ಪ್ರಧಾನಿ ನರೇಂದ್ರ ಮೋದಿ  ಅಮೇರಿಕಕ್ಕೆ ಭೇಟಿ ನೀಡಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜತೆ ಚರ್ಚೆ ನಡೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ