ಅತ್ಯಾಚಾರ ಪ್ರಕರಣ ಹಿಂಪಡೆಯಲು ನಿರಾಕರಣೆ: ಪೀಡಿತೆಯ ಪತಿಗೆ ಬೆಂಕಿ ಹಚ್ಚಿದ ಪೊಲೀಸ್ ಇನ್ಸಪೆಕ್ಟರ್

ಶುಕ್ರವಾರ, 21 ನವೆಂಬರ್ 2014 (11:19 IST)
ತಮ್ಮ ಮೇಲೆ ಅತ್ಯಾಚಾರ ಆರೋಪವನ್ನು ದಾಖಲಿಸಿದ ಮಹಿಳೆಯ ಪತಿಯನ್ನು ಪೊಲೀಸ್ ಇನ್ಸಪೆಕ್ಟರ್ ಒಬ್ಪರು ಜೀವಂತವಾಗಿ ದಹಿಸಿದ ಘಟನೆ ಬಾಗ್ಪತ್‌ನಲ್ಲಿ ನಡೆದಿದೆ. 

ಬಡೌತ್ ನಿವಾಸಿ ಮಹಿಳೆಯೊಬ್ಬರು ನೀಡಿರುವ ದೂರಿನ ಪ್ರಕಾರ ಸೋಮವಾರ ರಾತ್ರಿ ಆಕೆಯ ಗಂಡ ಮನೆಯಲ್ಲಿ ಇರಲಿಲ್ಲ. ಆ ಸಮಯದಲ್ಲಿ ಆಕೆಯ ಗಂಡನ ಸೋದರ ಸಂಬಂಧಿಯೊಬ್ಬ ತನ್ನ ನಾಲ್ಕು ಜನ ಸಹಚರರೊಂದಿಗೆ  ಬಲವಂತವಾಗಿ ಆಕೆಯ ಮನೆಯೊಳಕ್ಕೆ ನುಗ್ಗಿದ. ಅವರೆಲ್ಲರೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು. ಆಕೆ ಪ್ರತಿರೋಧ ಒಡ್ಡಲು ಪ್ರಯತ್ನಿಸಿದಾಗ ಸಾಯಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದರು. 
 
ಪೀಡಿತೆ ಮರುದಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದಳು. ಬುಧವಾರ ಮಧ್ಯಾಹ್ನ ಪ್ರಕರಣದ ವಿಚಾರಣೆಗೆಂದು ಆಕೆಯ ಮನೆಗೆ ಬಂದ ಪೊಲೀಸ್ ಇನ್ಸಪೆಕ್ಟರ್ ಒಬ್ಪರು  ದೂರನ್ನು ಹಿಂಪಡೆಯುವಂತೆ ಒತ್ತಡ ಹೇರತೊಡಗಿದರು. ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯ ಪತಿಯನ್ನಾತ ಜೀವಂತವಾಗಿ ಸುಟ್ಟುಬಿಟ್ಟ. 50%  ಸುಟ್ಟಿರುವ ಆಕೆಯ ಗಂಡನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಮಹಿಳೆಯ ಆರೋಪವನ್ನು ಪೊಲೀಸ್ ಪೇದೆ ನಿರಾಕರಿಸಿದ್ದಾರೆ. ಆಸ್ತಿ ವಿವಾದಕ್ಕೆ ಸಿಲುಕಿರುವ ಮಹಿಳೆಯ ಪತಿ ತಾನೇ ಬೆಂಕಿ ಹಚ್ಚಿಕೊಂಡು ಸುಳ್ಳು ಆರೋಪವನ್ನು ಹೇರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ