ಆರ್‌ಎಸ್ಎಸ್ ಶಾಲೆಗಳಲ್ಲಿ ಮುಸ್ಲಿಂ ಮಕ್ಕಳ ಸಂಖ್ಯೆಯಲ್ಲಿ 30% ಹೆಚ್ಚಳ

ಸೋಮವಾರ, 20 ಜೂನ್ 2016 (14:31 IST)
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ತಾವು ನಡೆಸುತ್ತಿರುವ ಶಾಲೆಗಳಲ್ಲಿ ಮುಸ್ಲಿಂ ಮತೀಯ ವಿದ್ಯಾರ್ಥಿಗಳ ಸಂಖ್ಯೆ ಎರಡು ವರ್ಷಗಳಲ್ಲಿ 30 % ಹೆಚ್ಚಾಗಿದೆ. 1,200 ಶಾಲೆಗಳಲ್ಲಿ 7,000 ಮುಸ್ಲಿ ಮಕ್ಕಳು ಅಭ್ಯಯಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳಿದೆ. 

ಈ ವಿದ್ಯಾರ್ಥಿಗಳು ಶ್ಲೋಕ, ಭೋಜನ ಮಂತ್ರಗಳ ಪಠಣೆಯಂತಹ ಕಟ್ಟುನಿಟ್ಟಿನ ನಿಯಮಗಳನ್ನು ಬಹಳ ನಮ್ರತೆಯಿಂದ ಅನುಸರಿಸುತ್ತಾರೆ. ಅಧ್ಯಯನದಲ್ಲಿ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಹ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದವರಾಗಿದ್ದಾರೆ ಎಂದು ಹಿಂದೂತ್ವ ಸಿದ್ಧಾಂತದಿಂದ ಗುರುತಿಸಿಕೊಳ್ಳುವ ಸಂಘ ತಿಳಿಸಿದೆ. 
 
ಮುಸ್ಲಿಂ ಬಾಲಕಿಯರು ಮತ್ತು ಬಾಲಕರು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಶೈಕ್ಷಣಿಕವಾಗಿ ಸಹ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಸರಸ್ವತಿ ಶಿಶು ಮಂದಿರ ಮತ್ತು ಸರಸ್ವತಿ ವಿದ್ಯಾ ಮಂದಿರ ಶಾಲೆಗಳ ಅಧಿಕಾರಿಗಳು ತಿಳಿಸಿದ್ದಾರೆ. 
 
ನಮ್ಮ ವಿದ್ಯಾರ್ಥಿಗಳಾದ ಮೊಹಮ್ಮದ್ ಅಖಿಬ್, ಅಫ್ತಾಬ್ ಆಲಮ್, ಇಜಾಜ್ ಅಹಮದ್, ಗುಫ್ರನುದ್ದೀನ್ ಮತ್ತು ಮೊಹಮ್ಮದ್ ಅಕ್ರಮ್ ರಾಷ್ಟ್ರೀಯ ಮಟ್ಟದ ಮತ್ತು ಯುವ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಪ್ರಶಶ್ತಿಗಳನ್ನು ಬಾಚಿಕೊಂಡಿದ್ದಾರೆ ಎಂದು ಸಂಘದ ಶಾಲೆಗಳನ್ನು ನಿರ್ವಹಿಸುವ ವಿದ್ಯಾಭಾರತಿಯ ರಾಜ್ಯ ನಿರೀಕ್ಷಕರಾದ ವಿದ್ಯಾ ಭಾರತಿ ತಿಳಿಸಿದ್ದಾರೆ.
 
ಈ ಶಾಲೆಗಳು ಪ್ರತಿದಿನ ಮುಂಜಾನೆಯನ್ನು ಸೂರ್ಯ ನಮಸ್ಕಾರ ಮತ್ತು ವಂದೇ ಮಾತರಂ ಮೂಲಕ ಪ್ರಾರಂಭಿಸುತ್ತವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ