ಶಾಕಿಂಗ್: ಮಾರಾಟಕ್ಕಿವೆ ಯುವತಿಯರ ಮೊಬೈಲ್ ಸಂಖ್ಯೆ

ಶುಕ್ರವಾರ, 3 ಫೆಬ್ರವರಿ 2017 (15:24 IST)
ಅಪರಾಧ ಪ್ರಕರಣಗಳಿಂದಲೇ ಸುದ್ದಿಯಾಗುತ್ತಿರುವ ಉತ್ತರ ಪ್ರದೇಶದಿಂದ ಬೆಚ್ಚಿಬೀಳಿಸುವ ಸುದ್ದಿಯೊಂದು ಹರಿದುಬಂದಿದೆ. ರಾಜ್ಯಾದ್ಯಂತ ಮೊಬೈಲ್ ರಿಚಾರ್ಜ್ ಅಂಗಡಿಗಳಿಂದ ಹುಡುಗಿಯರ ಮೊಬೈಲ್ ಸಂಖ್ಯೆ ಮಾರಾಟವಾಗುತ್ತಿವೆ.
ಹೌದು, ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಲು ಬರುವ ಯುವತಿಯರ ಮೊಬೈಲ್ ಸಂಖ್ಯೆಯನ್ನು ಮಾರಲಾಗುತ್ತಿದೆ. ಅವರ ಸೌಂದರ್ಯದ ಆಧಾರದ ಮೇಲೆ ಬೆಲೆಯನ್ನು ನಿಗದಿ ಪಡಿಸಲಾಗಿದ್ದು 50 ರಿಂದ 500 ರೂಪಾಯಿಯನ್ನು ಪಡೆದುಕೊಂಡು ಮೊಬೈಲ್ ಸಂಖ್ಯೆಯನ್ನು ನೀಡಲಾಗುತ್ತಿದೆ. 
 
ಈ ನಂಬರ್ ಪಡೆದುಕೊಳ್ಳುವ ಯುವಕರು, ಆ ನಂಬರ್‌ಗೆ ಕರೆ ಮಾಡಿ ಯುವತಿಯರ ಮೇಲೆ ಮಾನಸಿಕ ದೌರ್ಜನ್ಯವೆಸಗುತ್ತಿದ್ದಾರೆ. 
 
ಸರ್ಕಾರ ಆರಂಭಿಸಿರುವ 24 ಗಂಟೆ ಸಹಾಯವಾಣಿ 1090ಕ್ಕೆ ಕರೆ ಮಾಡಿದ ನೊಂದ ಯುವತಿಯರು ತಮ್ಮ ಸಮಸ್ಯೆಯನ್ನು ತೋಡಿಕೊಂಡಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.  
 
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಬಂದಿರುವ 6 ಲಕ್ಷ ದೂರುಗಳಲ್ಲಿ 90 ಪ್ರತಿಶತ ಫೋನ್‌ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಕೃತ್ಯಗಳಿಗೆ ಸಂಬಂಧಿಸಿವೆ. 
 
ಅತಿ ಸುಂದರವಾಗಿರುವ ಯುವತಿಯರ ಮೊಬೈಲ್ ಸಂಖ್ಯೆಗೆ 500 ರೂಪಾಯಿ ನಿಗದಿಯಾಗಿದ್ದರೆ, ಸಾಮಾನ್ಯ ಸೌಂದರ್ಯವತಿಯರ ಮೊಬೈಲ್ ಸಂಖ್ಯೆಗೆ 50 ರೂಪಾಯಿಯನ್ನು ನಿಗದಿ ಪಡಿಸಲಾಗಿದೆ. 
 
ಲಖನೌ, ಕಾನ್ಪುರ ನಗರ, ಅಲಹಾಬಾದ್, ವಾರಣಾಸಿ, ಆಗ್ರಾಗಳಿಂದ ಅತಿ ಹೆಚ್ಚಿನ ದೂರುಗಳು ದಾಖಲಾಗಿವೆ. 
 

ವೆಬ್ದುನಿಯಾವನ್ನು ಓದಿ