ಬಿಜೆಪಿ ಬಿಕ್ಕಟ್ಟು: ಉತ್ತರಾಖಂಡದಲ್ಲಿ 33 ನಾಯಕರ ಅಮಾನತು

ಸೋಮವಾರ, 6 ಫೆಬ್ರವರಿ 2017 (14:16 IST)
ಚುನಾವಣೆಯನ್ನು ಮುಂದಿಟ್ಟುಕೊಂಡಿರುವ ಉತ್ತರಾಖಂಡ ಬಿಜೆಪಿಯ ಭಾರಿ ಬಿಕ್ಕಟ್ಟು ತಲೆದೋರಿದೆ. ಚುನಾವಣೆಗೆ ಕೇವಲ 10 ದಿನಗಳಿರುವಾಗ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ 33 ಮಂದಿ ನಾಯಕರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಬನ್ಸಾಲ್ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದು ಪಕ್ಷ ವಿರೋಧಿ ಚಟುವಟಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ 33 ಮಂದಿಗೆ 6 ವರ್ಷಗಳ ಮಟ್ಟಿಗೆ ಗೇಟ್ ಪಾಸ್ ನೀಡಲಾಗಿದೆ, ಎಂದು ಸ್ಪಷ್ಟ ಪಡಿಸಿದ್ದಾರೆ. 
 
ಮುರಳಿ ಲಾಲ್ ಭಟ್, ಸತ್ಯೇಂದ್ರ ಸಿಂಗ್ ರಾಣಾ, ಮಹೇಶ್ ಪನ್ವಾರ್,  ಬುಧೀ ಸಿಂಗ್ ಪನ್ವಾರ್, ಜಪ್ಮೋಹನ್ ರಾವತ್, ಬಿಹಾರಿ ಲಾಲ್ ನೌಟಿಯಲ್, ದಿನೇಶ್ ಸೆಮ್ವಾಲ್, ವಿಜಯ್ ಬಹಾದೂರ್ ಸಿಂಗ್ ರಾವತ್, ಹರೀಶ್ ನೌಟಿಯಲ್, ಖುಷಾಲ್ ಸಿಂಗ್ ನೌಟಿಯಾಲ್, ಗ್ರಿಪಾಲ್ ಪೋಖ್ರಿಯಾಲ್, ರಾಜೇಶ್ ಸೆಮ್ವಾಲ್ , ಗಂಗೋತ್ರಿ ವಿಧಾನಸಭೆಯ ಗಿರೀಶ್ ರಾಮೋಲಾ ಅಮಾನತಾಗಿರುವ ಪ್ರಮುಖ ನಾಯಕರಾಗಿದ್ದಾರೆ. 
 
ಅಮಾನತುಗೊಂಡಿರೋ 33 ಬಂಡಾಯ ನಾಯಕರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. 
 
ಉತ್ತರಾಖಂಡದಲ್ಲಿ ಫೆಬ್ರವರಿ 15ರಂದು ಚುನಾವಣೆ ನಡೆಯಲಿದೆ. 
 

ವೆಬ್ದುನಿಯಾವನ್ನು ಓದಿ