ತುಮಕೂರಿನ ಜೈಲಿಗೆ ವಿ.ಕೆ.ಶಶಿಕಲಾ ಸ್ಥಳಾಂತರ...?

ಬುಧವಾರ, 8 ಮಾರ್ಚ್ 2017 (16:48 IST)
ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿಯಾಗಿ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರಿನ ಜೈಲಿಗೆ ಸ್ಥಳಾಂತರಿಸುವ ವಿಚಾರ ಕುರಿತಂತೆ ಪೊಲೀಸ್ ಮಹಾನಿರ್ದೇಶಕ( ಕಾರಾಗೃಹ) ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 
ತುಮಕೂರು ಜೈಲಿನಲ್ಲಿರುವ ಮೂಲಸೌಕರ್ಯ, ವಿಐಪಿ ಸೌಲಭ್ಯಗಳ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.
 
ಟ್ರಾಫಿಕ್ ರಾಮಸ್ವಾಮಿ ಎನ್ನುವವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಶಶಿಕಲಾ ಭೇಟಿಗೆ ತಮಿಳುನಾಡಿನಿಂದ ಜನ ಆಗಮಿಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇತರರ ಭೇಟಿಗೆ ಶಶಿಕಲಾ ಅವರಿಗೆ ಹೈಕೋರ್ಟ್ ನಿರ್ಭಂಧ ಹೇರಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
 
ಅಪರಾಧಿಯಾಗಿ ಜೈಲಿನಲ್ಲಿರುವ ಶಶಿಕಲಾರನ್ನು ತಮಿಳುನಾಡಿನ ಸಚಿವರು ಭೇಟಿ ಮಾಡುವುದು ಕಾನೂನುಬಾಹಿರ. ಕೂಡಲೇ ಅಂತಹ ಸಚಿವ, ಶಾಸಕರ ವಿರುದ್ಧ ರಾಜ್ಯಪಾಲರು ಕ್ರಮ ಕೈಗೊಳ್ಳುವಂತೆ ಆದೇಶ ನೀಡಬೇಕು ಎಂದು ರಾಮಸ್ವಾಮಿ ಅರ್ಜಿಯಲ್ಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ