ಮೋದಿ ಗೆಲುವಿನ ಕಾತರಿಕೆಯಲ್ಲಿ ತವರು ವಡ್ನಾಗರ್

ಗುರುವಾರ, 15 ಮೇ 2014 (19:43 IST)
ಮಣ್ಣಿನ ಮಗ ನರೇಂದ್ರ ಮೋದಿ ಗೆಲುವನ್ನು ಆಚರಿಸಲು ಅವರ ತವರು ವಡ್ನಾಗರ್ ಸಂಭ್ರಮದಿಂದ ಸಿದ್ಧವಾಗುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಮೋದಿ ಭಾರತದ ಪ್ರಧಾನಿ ಆಗುತ್ತಾರೆಂದು ಭವಿಷ್ಯ ನುಡಿದಿರುವುದರಿಂದ ಅವರ ಹುಟ್ಟೂರು ಅಮಿತಾನಂದಲ್ಲಿ ಮುಳುಗಿ ತೇಲುತ್ತಿದ್ದು  ಇಡಿ ಊರನ್ನು ಅಲಂಕೃತಗೊಳಿಸುವ ಕೆಲಸ ಭರದಿಂದ ಸಾಗಿದೆ.  
 
ಊರಿನ ಎಲ್ಲ ಬೀದಿಗಳಲ್ಲಿ, ಪ್ರತಿ ಮನೆಗಳಲ್ಲಿ, ಮರಗಿಡಗಳ ಮೇಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ  ಮಿನುಗುವ ವಿದ್ಯುತ್ ಬಲ್ಬ್‌ಗಳನ್ನು ಜೋಡಿಸಲಾಗಿದ್ದು, ಫಲಿತಾಂಶ ಪ್ರಕಟವಾಗುವ ದಿನವಾದ ಶುಕ್ರವಾರ ಅವನ್ನೆಲ್ಲ ಬೆಳಗಿಸಲಾಗುವುದು.  
 
ಶರ್ಮಿಷ್ಠ ಲೇಕ್ ಮತ್ತು ಐತಿಹಾಸಿಕ ಹಕ್ತೇಶ್ವರ್ ದೇವಾಲಯದ ಸುತ್ತ ದೀಪಗಳಿಂದ ಅಲಂಕರಿಸಲಾಗಿದೆ. ಮೋದಿ ಗೆಲುವು ಖಚಿತವಾದ ಮೇಲೆ ದೇವರಿಗೆ ಮಹಾ ಮಂಗಳಾರತಿಯನ್ನು ಮಾಡಲಾಗುವುದು. ಅಲ್ಲದೇ 125 ಕೆಜಿ ಪ್ರಸಾದವನ್ನು ಶಿವದೇವರಿಗೆ ನೈವೇದ್ಯ ಮಾಡಿ ಹಳ್ಳಿಯ ಜನರಿಗೆಲ್ಲ ವಿತರಿಸಲಾಗುವುದು. 
 
ಒಟ್ಟಿನಲ್ಲಿ ಮೋದಿ ಹುಟ್ಟೂರು, ತನ್ನ ಕೀರ್ತಿಯಕಲಶವಾದ ಮೋದಿ ಗೆಲುವಿನ ಸಂಭ್ರಮವನ್ನು ಭರ್ಜರಿಯಾಗಿಯೇ ಆಚರಿಸಲು ತಯಾರಾಗುತ್ತಿದೆ.

ವೆಬ್ದುನಿಯಾವನ್ನು ಓದಿ