ಗುಜರಾತ್ ದಂಗೆ ನಮ್ಮ ತಪ್ಪು ಎಂದಿದ್ದರಂತೆ ವಾಜಪೇಯಿ

ಶುಕ್ರವಾರ, 3 ಜುಲೈ 2015 (11:51 IST)
2002ರಲ್ಲಿ ನಡೆದ ಗುಜರಾತ್‌ನ ಗಲಭೆಗೆ ಅತೀವ ಅಸಮಾಧಾನ ವ್ಯಕ್ತ ಪಡಿಸಿದ್ದ ಅಂದಿನ ಪ್ರಧಾನಿ ಅಟಲ್‌‌ ಬಿಹಾರಿ ವಾಜಪೇಯಿ, ಇದು 'ನಮ್ಮಿಂದಾದ ತಪ್ಪು' ಎಂದು ಹೇಳಿದ್ದರು ಎಂದು ಭಾರತೀಯ ಗುಪ್ತಚರ ಸಂಸ್ಥೆ 'ರಾ' ದ ಮಾಜಿ ಮುಖ್ಯಸ್ಥ ಎ.ಎಸ್‌‌‌. ದುಲತ್‌‌‌ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದುಲತ್ ವಾಜಪೇಯಿಯವರ ಜತೆಗಿನ ತಮ್ಮ ಮಾತುಕತೆಯನ್ನು ಮೆಲುಕು ಹಾಕಿದ್ದಾರೆ. "ವಾಜಪೇಯಿ ಅವರೊಂದಿಗಿನ ನನ್ನ ಕೊನೆಯ ಮೀಟಿಂಗ್‌ನಲ್ಲಿ ವಾಜಪೇಯಿ ಗುಜರಾತ್ ಗಲಭೆ ಕುರಿತು ತೀವೃ ನೋವನ್ನು ವ್ಯಕ್ತ ಪಡಿಸಿದ್ದುರು ಮತ್ತು ಅದು ನಮ್ಮಿಂದಾದ ತಪ್ಪು ಎಂದು ಹೇಳಿದ್ದರು", ಎಂದು ದುಲತ್ ತಿಳಿಸಿದ್ದಾರೆ. 
 
"ಗೋಧ್ರೋತ್ತರ ಗಲಭೆ ತಮ್ಮಿಂದಾದ ತಪ್ಪು ಎಂಬ ಪಶ್ಚಾತಾಪ ಅವರಲ್ಲಿತ್ತು ಹಾಗೂ ಆ  'ದುಃಖ' ಅವರ ಮುಖದ ಸ್ಪಷ್ಟವಾಗಿ ಕಾಣುತ್ತಿತ್ತು", ಎಂದು ದುಲತ್ ಹೇಳಿದ್ದಾರೆ. 
 
ದುಲತ್, ಎಕ್ಸಟರ್ನಲ್ ಸ್ಪೈ ಎಜೆನ್ಸಿ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್‌ನಲ್ಲಿ 2000ನೇ ವರ್ಷದವರೆಗೆ ಸೇವೆ ಸಲ್ಲಿಸಿದ್ದರು. ನಂತರ ವಾಜಪೇಯಿಯವರಿಗೆ ವಿಶೇಷ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು.
 
ಪ್ರಸ್ತುತ ದೇಶದ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿ ಅವರು 2002ರ ಗೋಧ್ರಾ ಗಲಭೆ ವೇಳೆ ಗುಜರಾತ್‌‌‌ ಮುಖ್ಯಮಂತ್ರಿಯಾಗಿದ್ದರು. 

ವೆಬ್ದುನಿಯಾವನ್ನು ಓದಿ