ಲಲಿತ್ ಮೋದಿ ವಿವಾದ: ಪ್ರಧಾನಿ ನರೇಂದ್ರ ಮೋದಿಗೆ ಭೇಟಿಗೆ ರಾಜೇ ಸಿದ್ದತೆ

ಶನಿವಾರ, 27 ಜೂನ್ 2015 (17:56 IST)
ರಾಜಸ್ಥಾನದ ಮುಖ್ಯಮಂತ್ರಿ ನೀತಿ ಆಯೋಗದ ಸಭೆಗೆ ಹಾಜರಾಗಲು ನವದೆಹಲಿಗೆ ಆಗಮಿಸಿದ್ದು, ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.  
 
ಕಳಂಕಿತ ಹವಾಲಾ ಆರೋಪಿ ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ವೀಸಾ ದಾಖಲೆಗಳಿಗೆ ರಹಸ್ಯ ಸಾಕ್ಷಿಯಾಗಿ ಸಹಿ ಹಾಕಿರುವುದನ್ನು ಕಾಂಗ್ರೆಸ್ ಪಕ್ಷ ನಿನ್ನೆ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ, ರಾಜೇ ಬಿಜೆಪಿ ಹೈಕಮಾಂಡ್‌ನ್ನು ಸಂಪರ್ಕಿಸಿ ತಮ್ಮ ನಿರಪರಾಧಿತ್ವವನ್ನು ಮಂಡಿಸಲಿದ್ದಾರೆ ಎನ್ನಲಾಗಿದೆ.  
 
ದುಶ್ಯಂತ್ ಮಾಲೀಕತ್ವದ ಹೋಟೆಲ್‌ನಲ್ಲಿ ಮಾಜಿ ಐಪಿಎಲ್ ಆಯುಕ್ತ ಲಲಿತ್ ಮೋದಿ ಹೂಡಿಕೆ ಮಾಡಿರುವುದು ಅಧಿಕೃತವಾಗಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.  
 
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ವಿತ್ತಸಚಿವ ಅರುಣ್ ಜೇಟ್ಲಿ, ರಾಜೇಯವರನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ವಸುಂಧರಾ ರಾಜೇ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡದೆ ಮೌನವಾಗಿದ್ದಾರೆ. ಇದೊಂದು ಕೇವಲ ರಾಜಕೀಯ ಪ್ರೇರಿತ ಎನ್ನುವುದು ಅವರ ಬೆಂಬಲಿಗರ ವಾದವಾಗಿದೆ.
 

ವೆಬ್ದುನಿಯಾವನ್ನು ಓದಿ