ವಸುಂಧರಾ ರಾಜೇ ಲಲಿತ್ ಮೋದಿಯ ಬಿಜಿನೆಸ್ ಪಾರ್ಟನರ್: ಕಾಂಗ್ರೆಸ್

ಶನಿವಾರ, 27 ಜೂನ್ 2015 (15:27 IST)
ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಹವಾಲಾ ಆರೋಪಿ ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿಯವರ ಬಿಜಿನೆಸ್ ಪಾರ್ಟನರ್ ಆಗಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 
 
ರಾಜೇ ಪುತ್ರ ದುಶ್ಯಂತ್ ಮಾಲೀಕತ್ವದ ಕಂಪೆನಿಯಲ್ಲಿ ಲಲಿತ್ ಮೋದಿ 13 ಕೋಟಿ ರೂಪಾಯಿಗಳ ಹೂಡಿಕೆ ಮಾಡಿರುವುದು ಬಹಿರಂಗವಾಗಿದ್ದರಿಂದ ರಾಜೇ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ.
 
ಕಳೆದ 2013ರ ಚುನಾವಣೆ ಅಫಿಡವಿಟ್‌ನಲ್ಲಿ ನಿಯಂತ್ ಹೆರಿಟೇಜ್ ಹೋಟೆಲ್ ಕಂಪೆನಿಯಲ್ಲಿ ಕೇವಲ 3000 ಶೇರುಗಳನ್ನು ಹೊಂದಿರುವುದಾಗಿ ಮಾಹಿತಿ ನೀಡಿದ್ದರು. ತದನಂತರ ರಾಜೇ ಹೆಸರಿನಲ್ಲಿ 5000 ಶೇರುಗಳ ಏರಿಕೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ. 
 
ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ತಮ್ಮ ಆಸ್ತಿ ಪಾಸ್ತಿಗಳ ಬಗ್ಗೆ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಿದ್ದರಿಂದ ಯಾವುದೇ ಮುಚ್ಚಿಡುವ ಪ್ರಯತ್ನ ಮಾಡಿಲ್ಲ ಎಂದು ಬಿಜೆಪಿ ನಾಯಕರು ರಾಜೇಯವರನ್ನು ಸಮರ್ಥಿಸಿಕೊಂಡಿದ್ದಾರೆ.
 
ಕಳೆದ 2007ರಲ್ಲಿ ಲಲಿತ್ ಮೋದಿ ದುಶ್ಯಂತ್ ಕಂಪೆನಿಯಲ್ಲಿ ಮೂರು ಕೋಟಿ ರೂಪಾಯಿಗಳ ಹೂಡಿಕೆ ಮಾಡಿದ್ದರು. ನಂತರ 10 ರೂಪಾಯಿ ಮೌಲ್ಯದ ಪ್ರತಿ ಶೇರನ್ನು 96 ಸಾವಿರ ರೂಪಾಯಿಗಳಿಗೆ ಖರೀದಿಸಿರುವುದು ಬಹಿರಂಗವಾಗಿರುವುದು ಕೋಲಾಹಲಕ್ಕೆ ಕಾರಣವಾಗಿದೆ.
 

ವೆಬ್ದುನಿಯಾವನ್ನು ಓದಿ