ಯುಪಿಎ ಮತ್ತು ಎನ್‌ಡಿಎ ಸಚಿವರನ್ನು ಹೋಲಿಸಲಾಗದು: ವೆಂಕಯ್ಯ ನಾಯ್ಡು

ಮಂಗಳವಾರ, 4 ಆಗಸ್ಟ್ 2015 (16:49 IST)
ಮುಂಗಾರು ಅಧಿವೇಶನ ವ್ಯರ್ಥವಾಗುತ್ತಿರುವ ಹಿನ್ನೆಲೆಯಲ್ಲಿ  ನಿನ್ನೆ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರು ತಮ್ಮ ಹಠದಿಂದ ಹಿಂದೆ ಸರಿಯಲು ಒಪ್ಪದಿದ್ದರಿಂದ ಈ ಹಿಂದಿನ ಸಭೆಗಳಂತೆ ವಿಫಲತೆಯನ್ನು ಕಂಡಿತು.
ಕಾಂಗ್ರೆಸ್ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಮತ್ತು ಬಿಜೆಪಿ ಮುಖ್ಯಮಂತ್ರಿಗಳಾದ ರಾಜೆ ಮತ್ತು ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆಗೆ ಒತ್ತಾಯಿಸಿದರೆ  ಬಿಜೆಪಿ ಅದನ್ನು ಖಡಾಖಂಡಿತವಾಗಿ ತಳ್ಳಿ ಹಾಕಿತು. 
 
"ನಮ್ಮ ಸಚಿವರು ಯಾವುದೇ ತಪ್ಪೆಸಗಿಲ್ಲ.  ಯುಪಿಎ ಮತ್ತು ಎನ್‌ಡಿಎ ಸಚಿವರನ್ನು ಹೋಲಿಸಲಾಗದು", ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ವೆಂಕಯ್ಯ ನಾಯ್ಡು ಹೇಳಿದ್ದಾರೆ. 
 
"ಸಭೆಯ ಫಲಿತಾಂಶ ಶೂನ್ಯ, ನಮ್ಮ ಬೇಡಿಕೆಯಿಂದ ನಾವು ಹಿಂದೆ ಸರಿಯುವುದಿಲ್ಲ", ಎಂದು ಕಾಂಗ್ರೆಸ್ ಸಂಸದ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ. 
 
ಸರ್ವ ಪಕ್ಷಗಳ ಸಭೆಗೂ ಮುನ್ನ ಸಭೆ ಸೇರಿದ್ದ ಕಾಂಗ್ರೆಸ್ ಸಂಸದರಿಗೆ ಅಧ್ಯಕ್ಷೆ ಸೋನಿಯಾ ಗಾಂಧಿ ನಮ್ಮ ನಿರ್ಧಾರಕ್ಕೆ ಬದ್ಧರಾಗಿರೋಣ, ಬೇಡಿಕೆ ಈಡೇರುವವರೆಗೂ ನಾವು ಚರ್ಚೆ ನಡೆಸಲು ಅವಕಾಶ ನೀಡುವುದು ಬೇಡ ಎಂದು ಸೂಚಿಸಿದ್ದರು. 

ವೆಬ್ದುನಿಯಾವನ್ನು ಓದಿ