ಡಾ.ಯು.ಆರ್. ಅನಂತಮೂರ್ತಿಯವರ ಕೊನೆಯಾಸೆ ಏನಾಗಿತ್ತು?

ಶನಿವಾರ, 23 ಆಗಸ್ಟ್ 2014 (08:47 IST)
ಕಳೆದ ಶುಕ್ರವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ (81) ಅವರ ಅಂತ್ಯಸಂಸ್ಕಾರವನ್ನು ಬೆಂಗಳೂರು ವಿಶ್ವವಿದ್ಯಾಲಯದ ಬಳಿಯ ಕಲಾಗ್ರಾಮದಲ್ಲಿ ನೆವೇರಿಸಲು ನಿರ್ಧರಿಸಲಾಗಿದೆ. ಈ ಮೂಲಕ ಅವರ ಕೊನೆಯ ಆಸೆಯೊಂದು ಈಡೇರದಂತಾಗಿದೆ. 

ಇಂದು ತಮ್ಮ ತಂದೆಯ ಕೊನೆಯಾಸೆಯನ್ನು ಅವರ ಪುತ್ರ ಶರತ್ ಬಹಿರಂಗ ಪಡಿಸಿದ್ದು, ತಮ್ಮ ಮರಣದ ನಂತರ ದೇಹವನ್ನು  ಹಿಂದು ಸಂಪ್ರದಾಯದಂತೆ ತಮ್ಮ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ಮಾಡಬೇಕು. ತಾನು ಹುಟ್ಟಿದ ಮನೆಯನ್ನು ಗ್ರಂಥಾಲಯ ಮಾಡಬೇಕೆಂದು ಸಾಹಿತಿ ಪುತ್ರನಲ್ಲಿ  ಮೂರ್ತಿ ಹೇಳಿಕೊಂಡಿದ್ದರಂತೆ. ಆದರೆ ಕಾರಣಾಂತರಗಳಿಂದ ಅವರ ಅಂತ್ಯಕ್ರಿಯೆಯನ್ನು  ಬೆಂಗಳೂರಿನಲ್ಲೇ  ಮಾಡಲಾಗುತ್ತಿದ್ದು ಸರಸ್ವತಿ ಪುತ್ರನ ಕೊನೆಯಾಸೆಯೊಂದು ಈಡೇರದಂತಾಗಿದೆ. 
 
ಅನಂತಮೂರ್ತಿ ಅವರು 1932ರ ಡಿಸೆಂಬರ್ 21 ರಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಲ್ಲಿ ಉಡುಪಿ ರಾಜಗೋಪಾಲಾಚಾರ್ಯ ಮತ್ತು ಸತ್ಯಮ್ಮ ಅವರ ಪುತ್ರನಾಗಿ ಜನಿಸಿದ್ದರು. 

ವೆಬ್ದುನಿಯಾವನ್ನು ಓದಿ