ಶರಣಾಗಲು ಶಶಿಕಲಾಗೆ ನೀಡಿದ್ದ ಗಡುವು ಮುಂಜಾನೆ 10.30ಕ್ಕೆ ಮುಕ್ತಾಯ, ಮುಂದೇನು?

ಬುಧವಾರ, 15 ಫೆಬ್ರವರಿ 2017 (09:20 IST)
ಸುಪ್ರೀಂಕೋರ್ಟ್‌ನಿಂದ 4 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ಅವರಿಗೆ ಶರಣಾಗಲು ನೀಡಿದ್ದ ಗಡುವು ಇಂದು 10.30ಕ್ಕೆ ಮುಗಿಯಲಿದೆ. ಬಂಧನದಿಂದ ರಕ್ಷಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ ಶಶಿಕಲಾ ಪರ ವಕೀಲರು ತೀರ್ಪು ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದಾರೆ.ಈ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಸ್ವೀಕೃತವಾದರೆ ತಾತ್ಕಾಲಿಕವಾಗಿ ಶಶಿಕಲಾ ಬಂಧನದಿಂದ ಪಾರಾಗಲಿದ್ದಾರೆ.

ಇನ್ನೊಂದೆಡೆ, ಇಂದೇ ಶರಣಾಗುವಂತೆ ಶಶಿಕಲಾ ಅವರಿಗೆ ಅವರ ವಕೀಲರು ಸಲಹೆ ನೀಡಿದ್ದಾರೆ. ಹೀಗಾಗಿ ಇನ್ನು ಕೆಲವೇ ಹೊತ್ತಿನಲ್ಲಿ ನಿವಾಸದಿಂದ ಹೊರಡಲಿರುವ ಶಶಿಕಲಾ ರಸ್ತೆಮಾರ್ಗವಾಗಿ ಬೆಂಗಳೂರಿಗೆ ಪಯಣಿಸಲಿದ್ದಾರೆ.ಸಂಜೆ 3 ರ ಸುಮಾರಿಗೆ ಅವರು ಬೆಂಗಳೂರಿನ ವಿಶೇಷ ನ್ಯಾಯಾಧೀಶರ ಮುಂದೆ ಶರಣಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಇನ್ನೊಂದು ಮೂಲಗಳ ಪ್ರಕಾರ, ಶಶಿಕಲಾ ಅನಾರೋಗ್ಯದ ನೆಪ ಒಡ್ಡಿ ಕೆಲ ಸಮಯದ ನಂತರ ಶರಣಾಗುವ ಚಿಂತನೆ ನಡೆಸಿದ್ದಾರೆ.
 
21 ವರ್ಷಗಳ ಹಿಂದಿನ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ ಸೇರಿದಂತೆ ಮೂವರು ಅಪರಾಧಿಗಳು ಎಂದು ನಿನ್ನೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.
 

ವೆಬ್ದುನಿಯಾವನ್ನು ಓದಿ