ಸರತಿ ಸಾಲಿನಿಂದ ಜಂಪ್ ಮಾಡಲು ಹೋದ ಚಿರಂಜೀವಿಗೆ ಮತದಾರ ತರಾಟೆ

ಬುಧವಾರ, 30 ಏಪ್ರಿಲ್ 2014 (19:33 IST)
ಮತವನ್ನು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರನ್ನು ಅನುಸರಿಸದೇ, ಅವರನ್ನು ದಾಟಿ ಮುಂದೆ ಹೋದ ನಟ, ರಾಜಕಾರಣಿ ಚಿರಂಜೀವಿಯನ್ನು ತಡೆದು ನಿಲ್ಲಿಸಿದ ಮತದಾರನೊಬ್ಬ  ನಿಮಗೆ ವಿಶೇಷ ಸತ್ಕಾರ ಕೊಡಬೇಕಾ?  ನೀವು ಕೇಂದ್ರ ಮಂತ್ರಿಯಾಗಿರಬಹುದು. ಆದರೆ ನೀವು ಹಿರಿಯ ನಾಗರಿಕರಲ್ಲ. ಸಾಲಿನಲ್ಲಿ ನಿಲ್ಲದೇ, ನಿಮ್ಮ ಕುಟುಂಬದ ಜತೆ ನೀವು ಸಾಲನ್ನು ದಾಟಿ ಮುಂದೆ ಹೋಗುವ ಹಾಗಿಲ್ಲ ಎಂದು ತಾಕೀತು ನೀಡಿದರು.
 
ಕಾಂಗ್ರೆಸ್ ನಾಯಕ ಚಿರಂಜೀವಿ ತನ್ನ ಪತ್ನಿ, ಮಗ ಮತ್ತು ಮಗಳ ಜತೆ ಮತ ಚಲಾಯಿಸಲು ಬಂದಿದ್ದರು.  ಈ ಮಾತಿಗೆ ಪ್ರತಿಯಾಗಿ ಅಲ್ಲಿ ನಿಂತಿದ್ದ ಇತರ ಮತದಾರರು ಚಪ್ಪಾಳೆ ತಟ್ಟುವುದರ ಮೂಲಕ ನಟನಿಗೆ ಕಿರಿಕಿರಿ ಉಂಟು ಮಾಡಿದರು. 
 
ತನಗೆ ತಾಕೀತು ಮಾಡಿದ ಮತದಾರನ ಬಳಿ ಹೋದ ಅವರು "ನಾನು ಸರತಿ ಸಾಲನ್ನು ದಾಟಿ ಮುಂದೆ ಹೋಗಲಿಲ್ಲ. ಕೇವಲ ಮತ ಚಲಾಯಿಸಲು ನಾನು ಲಂಡನ್‌ನಿಂದ ಇಲ್ಲಿಗೆ ಬಂದಿದ್ದೇನೆ. ಮತದಾರರ ಹೆಸರಲ್ಲಿ ನನ್ನ ಹೆಸರು ಇದೆಯೇ ಎಂದು ಪರೀಕ್ಷಿಸಲು ಸಾಲನ್ನು ಬಿಟ್ಟು ಒಳ ಹೊರಟಿದ್ದೆ" ಎಂದು ಸ್ಪಷ್ಟಪಡಿಸಿದರು.ಮಾಧ್ಯಮಗಳು 'ಓವರ್ ಎಕ್ಟಿಂಗ್' ಮಾಡುತ್ತಿವೆ ಎಂದು ಮೆಗಾಸ್ಟಾರ್ ಚಿರಂಜೀವಿ ಆರೋಪಿಸಿದರು.    
 

ವೆಬ್ದುನಿಯಾವನ್ನು ಓದಿ