ವ್ಯಾಪಂ ಹಗರಣ: ಕೇಂದ್ರ ಸಚಿವೆಯಾಗಿದ್ದರೂ ಹೆದರಿಕೆ ಆಗ್ತಿದೆ ಎಂದ ಉಮಾಭಾರತಿ

ಮಂಗಳವಾರ, 7 ಜುಲೈ 2015 (15:52 IST)
ವ್ಯಾಪಂ ಹಗರಣದ ಅಸಹಜ ಸಾವುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಕೇಂದ್ರ ಸಚಿವೆ ಉಮಾಭಾರತಿ, ಸಚಿವೆಯಾಗಿದ್ದ ನನಗೆ ಭೀತಿ ಎದುರಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. 
 
ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣದಲ್ಲಿ ಭಾಗಿಯಾದವರು ಅಸಹಜ ಸಾವಿಗೀಡಾಗುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.ನಾನು ಕೇಂದ್ರ ಸಚಿವೆಯಾಗಿದ್ದರೂ ನನಗೆ ಹೆದರಿಕೆಯಾಗುತ್ತಿದೆ. ನನ್ನ ಕಳವಳವನ್ನು ಸಿಎಂ ಚೌಹಾನ್‌‍ಗೆ ತಿಳಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. 
 
ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದ್ದವರಲ್ಲಿ ನಾನೇ ಮೊದಲಿಗಳು. ವ್ಯಾಪಂ ಹಗರಣದ ತನಿಖೆ ಪಾರದರ್ಶಕವಾಗಿ ನಡೆಯಲಿ ಎನ್ನುವ ಕೇಂದ್ರ ಸಚಿವ ಅರುಣ್ ಜೇಟ್ಲಿ ನಿಲುವನ್ನು ಸಮರ್ಥಿಸಿಸುತ್ತೇನೆ ಎಂದಿದ್ದಾರೆ.
 
ಕಳೆದ 2012ರಿಂದ ಇಲ್ಲಿಯವರೆಗೆ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ 48 ಅಸಹಜ ಸಾವುಗಳು ಸಂಭವಿಸಿವೆ. ಹಗರಣದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
 
ಕಳೆದ ಶನಿವಾರದಿಂದ ಪತ್ರಕರ್ತ, ವೈದ್ಯಕೀಯ ಕಾಲೇಜಿನ ಡೀನ್ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
 

ವೆಬ್ದುನಿಯಾವನ್ನು ಓದಿ