ಕಾಣೆಯಾಗಿದ್ದ ಸ್ನ್ಯಾಪ್‌ಡೀಲ್ ಉದ್ಯೋಗಿ ದಿಪ್ತಿ ಸರ್ನಾ ಮರಳಿ ಮನೆಗೆ

ಶುಕ್ರವಾರ, 12 ಫೆಬ್ರವರಿ 2016 (15:38 IST)
ಕಳೆದ 36 ಗಂಟೆಗಳಿಂದ ಕಾಣೆಯಾಗಿದ್ದ ಸ್ನ್ಯಾಪ್‌ಡೀಲ್ ಉದ್ಯೋಗಿ ದಿಪ್ತಿ ಸರ್ನಾ ತಮ್ಮ ಗಾಜಿಯಾಬಾದ್ ನಿವಾಸಕ್ಕೆ ಇಂದು ಮರಳಿದ್ದಾರೆ. 
 
ನಾಲ್ವರು ಯುವಕರು ತಮ್ಮ ಗುರುತು ಪತ್ತೆ ಹಚ್ಚದಿರಲು ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಿಸಿದ್ದರು. ಆದರೆ, ಯಾವುದೇ ರೀತಿಯ ದೈಹಿಕ ಹಲ್ಲೆ ಮಾಡಿಲ್ಲ ಎಂದು ದಿಪ್ತಿ ಸ್ಪಷ್ಟಪಡಿಸಿದ್ದಾರೆ.
 
ಹರಿಯಾಣಾದ ಪಾಣಿಪತ್‌ನಿಂದ ಕಾಣೆಯಾಗಿದ್ದ 23 ವರ್ಷ ವಯಸ್ಸಿನ ದಿಪ್ತಿಯನ್ನು ಗಾಜಿಯಾಬಾದ್‌ನಲ್ಲಿ ಅಪಹರಿಸಲಾಗಿತ್ತು. 36 ಗಂಟೆಗಳ ನಂತರ ಆಕೆ ಪೋಷಕರಿಗೆ ಕರೆ ಮಾಡಿ ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ದಿಪ್ತಿ ಸರ್ನಾರ ಮೇಲೆ ಅತ್ಯಾಚಾರವಾಗಲಿ ಅಥವಾ ದೈಹಿಕ ಹಲ್ಲೆಯಾಗಲಿ ನಡೆದಿಲ್ಲ. ಸುರಕ್ಷಿತವಾಗಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾಳೆ. ಆಕೆಯ ಪತ್ತೆಗಾಗಿ 200 ಪೊಲೀಸ್ ಸಿಬ್ಬಂದಿಗಳನ್ನು ಕಾರ್ಯಾಚರಣೆಗಳಿಸಿ ಪ್ರದೇಶದಾದ್ಯಂತ ಶೋಧ ಕಾರ್ಯ ಕೈಗೊಳ್ಳಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
 
23 ವರ್ಷ ವಯಸ್ಸಿನ ದಿಪ್ತಿ ಸ್ನ್ಯಾಪ್‌ಡೀಲ್‌ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಉದ್ಯೋಗಿಯಾಗಿದ್ದಾಳೆ. ಗುರ್ಗಾಂವ್‌ನಿಂದ ತನ್ನ ಮನೆಯಿರುವ ಗಾಜಿಯಾಬಾದ್‌ಗೆ ತೆರಳುತ್ತಿರುವ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ಆಕೆಯನ್ನು ಅಪಹರಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ