ನೇಪಾಳ ಭೂಕಂಪದ ಬಗ್ಗೆ ಮೋದಿ ಹೇಳುವವರೆಗೆ ನನಗೆ ಮಾಹಿತಿಯಿರಲಿಲ್ಲ: ರಾಜನಾಥ್ ಸಿಂಗ್

ಮಂಗಳವಾರ, 28 ಏಪ್ರಿಲ್ 2015 (18:30 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನಗೆ ಕರೆ ಕಳುಹಿಸಿ ಚರ್ಚೆ ನಡೆದಾಗಲೇ ನನಗೆ ನೇಪಾಳದಲ್ಲಿ ಭೂಕಂಪ ಸಂಭವಿಸಿದೆ ಎನ್ನುವ ಮಾಹಿತಿ ಗೊತ್ತಾಯಿತು ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.

ಕೇಂದ್ರದ ಗುಪ್ತಚರ ಸಂಸ್ಥೆಗಳು ರಾಜನಾಥ್ ಸಿಂಗ್ ವ್ಯಾಪ್ತಿಗೆ ಒಳಪಡುತ್ತಿದ್ದರೂ ಅಧಿಕಾರಿಗಳು ಭೀಕರ ಭೂಕಂಪದ ಬಗ್ಗೆಸಚಿವರಿಗೆ ಮಾಹಿತಿ ನೀಡದಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನಗೆ ಕರೆ ಮಾಡಿ 3 ಗಂಟೆಗೆ ತುರ್ತುಸಭೆಯಿದ್ದು, ಏನಾಗಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ಬಂದಿರಬಹುದು ಎಂದು ಹೇಳಿ ವಿವರಿಸಿದಾಗ ಮಾತ್ರ ನನಗೆ ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಮಾಹಿತಿ ದೊರೆಯಿತು. ಕೂಡಲೇ ನಾನು ಟೆಲಿವಿಜನ್ ಚಾನೆಲ್ ನೋಡತೊಡಗಿದೆ ಎಂದು ತಿಳಿಸಿದ್ದಾರೆ.

ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ನನಗೆ ತಿಳಿದಿರಲಿಲ್ಲ ಎನ್ನಲು ಮುಜಗರವಾಗಲ್ಲ.ಯಾಕೆಂದರೆ ಪ್ರಾಮಾಣಿಕವಾಗಿ ನನಗೆ ತಿಳಿದಿರಲಿಲ್ಲ. ಆದರೆ, ನನಗಿಂತ ಮೊದಲೇ ಪ್ರಧಾನಿಯವರಿಗೆ ಮಾಹಿತಿ ಲಭಿಸಿತ್ತು. ಗುಪ್ತಚರ ಅಧಿಕಾರಿಗಳು ಕಾರ್ಯವೈಖರಿ ಪ್ರಶ್ನಾರ್ಹವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೇಪಾಳದಲ್ಲಿ ಭೂಕಂಪವಾಗುವ ಕೆಲವೇ ನಿಮಿಷಗಳ ಹಿಂದೆ ನಾನು, ಪ್ರಧಾನಿ ಮೋದಿಯವರೊಂದಿಗೆ ನ್ಯಾಷನಲ್ ಇಂಟಲಿಜೆನ್ಸ್ ಆಕಾಡೆಮಿಯ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದೆ. ಉದ್ಘಾಟನೆಯ ನಂತರ ಮೋದಿ ತೆರಳಿದಾಗ ಅವರ ಹಿಂದೆ ನಾನು ಕೂಡಾ ತೆರಳಿದೆ.. ಕೇವಲ 10 ನಿಮಿಷದಲ್ಲಿ ನಾನು ಮನೆಯಲ್ಲಿದ್ದೆ. ಆದರೆ, ನನಗಿಂತ ಮೊದಲೇ ಮೋದಿಯವರಿಗೆ ನೇಪಾಳದ ಭೂಕಂಪದ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ