ನಾವು ಬೌಂಡರಿಗಳನ್ನು, ಸಿಕ್ಸರುಗಳನ್ನು ಹೊಡಿಯೋರು: ಗಡ್ಕರಿ

ಶುಕ್ರವಾರ, 27 ಫೆಬ್ರವರಿ 2015 (17:44 IST)
ಉದ್ದೇಶಿತ ಭೂಸುಧಾರಣೆ ಕುರಿತು ಸರ್ಕಾರದ ಸ್ಥಿತಿಗತಿಯ ಬಗ್ಗೆ ಸೃಜನಾತ್ಮಕ ಅಂದಾಜನ್ನು ಹಿರಿಯ ಸಚಿವ ನಿತಿನ್ ಗಡ್ಕರಿ ಮಾಡಿದ್ದಾರೆ. ನಾವು ಹಿಂದಕ್ಕೆ ಹೆಜ್ಜೆ ಇರಿಸಿಲ್ಲ, ಮುಂದಕ್ಕೆ ಹೆಜ್ಜೆ ಇರಿಸಿದ್ದೇವೆ. ನಾವು ಬೌಂಡರಿಗಳನ್ನು ಮತ್ತು ಸಿಕ್ಸರುಗಳನ್ನು ಹೊಡೆಯುವವರು ಎಂದು ಗಡ್ಕರಿ ವಿಶ್ಲೇಷಿಸಿದರು.

ನಾಲ್ಕು ತಿಂಗಳ ಹಿಂದೆ ಅವರು ಗ್ರಾಮೀಣ ಅಭಿವೃದ್ಧಿಯ ಸಚಿವರಾಗಿದ್ದು, ಡಿಸೆಂಬರ್‌ನಲ್ಲಿ ಘೋಷಿಸಿದ ಸುಗ್ರೀವಾಜ್ಞೆಯ ಹಿಂದಿನ ಮುಖ್ಯ ಶಕ್ತಿಯಾಗಿದ್ದರು. ಮೂಲಸೌಲಭ್ಯ ಮತ್ತು ಕೈಗಾರಿಕೆಗಾಗಿ ಉದ್ಯಮಗಳಿಗೆ ಭೂಮಿ ಖರೀದಿ ಸುಲಭಗೊಳಿಸುವುದು ಈ ಭೂಸ್ವಾಧೀನ ಕಾಯ್ದೆಯ ಮುಖ್ಯ ಉದ್ದೇಶವಾಗಿತ್ತು. ಈ ಸಂಸತ್ತಿನ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಅನುಮೋದನೆಯಾಗದಿದ್ದರೆ ರದ್ದಾಗುತ್ತದೆ.

ಇದನ್ನು ರೈತ ವಿರೋಧಿ ಎಂದು ವಿಪಕ್ಷ ಈಗಾಗಲೇ ಹುಯಿಲೆಬ್ಬಿಸಿದೆ. ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ  ಪ್ರತಿಪಕ್ಷದೊಂದಿಗೆ ಸಮಾಲೋಚಿಸಿ ಸುಗ್ರೀವಾಜ್ಞೆಗೆ ಬದಲಾವಣೆ ಮಾಡಲು ಸರ್ಕಾರ ಸಿದ್ಧ ಎಂದು ಹೇಳಿದರು.ಆದರೆ  ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಂಡಿಸಿದ ಭೂಸುಧಾರಣೆ ಕಾಯ್ದೆ ಮಹತ್ವದ್ದಾಗಿದ್ದರೆ ಚುನಾವಣೆಯಲ್ಲಿ ಸಂಪೂರ್ಣ ಸೋತಿದ್ದೇಕೆ ಎಂದು ಮೋದಿ ಪ್ರಶ್ನಿಸಿದರು. 

ವೆಬ್ದುನಿಯಾವನ್ನು ಓದಿ