ಕನ್ಹಯ್ಯಾ ಕಮಾರ್‌ನನ್ನು ಮನಬಂದಂತೆ ಥಳಿಸಿದ ಸುಪ್ರೀಂಕೋರ್ಟ್ ವಕೀಲರು

ಬುಧವಾರ, 17 ಫೆಬ್ರವರಿ 2016 (16:29 IST)
ದೇಶದ್ರೋಹದ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಬಂಧಿತನಾದ ಕನ್ಹಯ್ಯಾ ಕುಮಾರ್‌‌ನನ್ನು ವಿಚಾರಣೆಗಾಗಿ ಇಂದು ಪಟಿಯಾಲಾ ಕೋರ್ಟ್‌ಗೆ ಹಾಜರು ಪಡಿಸುತ್ತಿರುವ ಸಂದರ್ಭದಲ್ಲಿಯೇ ಉದ್ರಿಕ್ತ ವಕೀಲರ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
 
ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ಕನ್ಹಯ್ಯಾ ಕುಮಾರ್‌ನಿಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಲ್ಲದೇ, ಮನಬಂದಂತೆ ಥಳಿಸಿ ಹಲ್ಲೆ ನಡೆಸಿದ್ದಾರೆ. ಆತನನ್ನು ಥಳಿಸಿರುವುದಕ್ಕೆ ಹೆಮ್ಮೆಯಾಗಿದೆ ಎಂದು ವಕೀಲರ ಗುಂಪು ಹೇಳಿಕೆ ನೀಡಿದೆ.   
 
200 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ವಕೀಲರ ಗುಂಪು ಆರೋಪಿ ಕನ್ಹಯ್ಯಾ ಕುಮಾರ್‌ನ್ನು ಗುಂಡಿ ಹಾರಿಸಿ ಹತ್ಯೆ ಮಾಡಿ, ಇಲ್ಲವಾದಲ್ಲಿ ಗಲ್ಲಿಗೇರಿಸಿ ಎಂದು ಘೋಷಣೆಗಳನ್ನು ಕೂಗಿದರು. ಅಷ್ಟರಲ್ಲಿಯೇ ಅಲ್ಲಿಗೆ ಬಂದ ಕನ್ಹಯ್ಯಾ ಕುಮಾರ್ ಮೇಲೆ ಗುಂಪು ಹಲ್ಲೆ ನಡೆಸಿತು.
 
ದೇಶದ್ರೋಹಿ ಕನ್ಹಯ್ಯಾ ಕುಮಾರ್‌ನನ್ನು ಥಳಿಸಿರುವುದಕ್ಕೆ ಸಂತಸವಾಗಿದೆ ಎಂದು ವಕೀಲರ ಗುಂಪು ಹೇಳಿಕೊಂಡಿದೆ. ವಕೀಲರು ಹಲ್ಲೆ ನಡೆಸುತ್ತಿರುವಾಗ ಪೊಲೀಸರು ಮೂಕಪ್ರೇಕ್ಷಕರಾಗಿರುವುದು ಜೆಎನ್‌ಯು ವಿದ್ಯಾರ್ಥಿಗಳಲ್ಲಿ ಅಸಮಾಧಾನ ಮೂಡಿಸಿದೆ. 
 
ಇದೊಂದು ದುರದೃಷ್ಟಕರ ಸಂಗತಿ, ವಕೀಲರು ಇಂತಹ ಕೀಳು ಮಟ್ಟಕ್ಕೆ ಇಳಿದಾಗ ಏನು ಮಾಡಲು ಸಾಧ್ಯ. ಕಾನೂನು ಸುವ್ಯವಸ್ಥೆ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
 

ವೆಬ್ದುನಿಯಾವನ್ನು ಓದಿ