ಮೇಕೆದಾಟು ವಿವಾದ; ಚರ್ಚೆ ನಡೆಸಲು ಉಭಯ ರಾಜ್ಯಗಳಿಗೆ ಮನವಿ : ಬಿಜೆಪಿ

ಶನಿವಾರ, 25 ಏಪ್ರಿಲ್ 2015 (18:26 IST)
ಮೇಕೆದಾಟು ಅಣೆಕಟ್ಟಿನ ಕುರಿತು ಸಮಾಲೋಚನೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಮನವೊಲಿಸಲು ಪ್ರಯತ್ನಿಸುವುದಾಗಿ ಬಿಜೆಪಿಯ ಹಿರಿಯ ನಾಯಕರು ತಿಳಿಸಿದ್ದಾರೆ.

"ಕರ್ನಾಟಕದ ಮೇಕೆದಾಟುವಿನಲ್ಲಿ ಆಣೆಕಟ್ಟು ನಿರ್ಮಿಸುವ ಕುರಿತು ಯೋಜನೆ ರೂಪಿಸಿರುವುದಕ್ಕೆ ಮತ್ತು ತಮಿಳುನಾಡು ಅದಕ್ಕೆ ವಿರೋಧಿಸುತ್ತಿರುವುದರ ಕುರಿತು ಪ್ರಶ್ನೆ ಕೇಳಿದ ವರದಿಗಾರರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರಲೀಧರ್ ರಾವ್", ಈ ರೀತಿಯಾಗಿ ಉತ್ತರಿಸಿದ್ದಾರೆ. 
 
"ಒಮ್ಮತ ಮೂಡಿಸುವುದು ಬಹಳ ಮುಖ್ಯ ಮತ್ತು ಯಾವುದೇ ಒಂದು ರಾಜ್ಯವನ್ನು ವಂಚಿಸುವುದು ಒಕ್ಕೂಟ ರಚನೆಯ ರಾಜ್ಯದಲ್ಲಿ ಸಮ್ಮತವಲ್ಲ",  ಎಂದು ಅವರು ಹೇಳಿದ್ದಾರೆ. 
 
ಎಪ್ರಿಲ್ 30 ರಂದು ಸರ್ವಪಕ್ಷಗಳ ನಿಯೋಗ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಅಣೆಕಟ್ಟು ನಿರ್ಮಾಣದ ಕುರಿತು ಚರ್ಚಿಸಲಿದೆ ಎಂದು ಕರ್ನಾಟಕ ಸರಕಾರದ ಘೋಷಿಸಿದ ಬಳಿಕ ರಾವ್ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 
 
"ತಮಿಳುನಾಡಿನ ಆತಂಕ ನಮಗೆ ಅರ್ಥವಾಗುತ್ತದೆ. ಮೇಕೆದಾಟು ಯೋಜನೆಗೆ ಇನ್ನುವರೆಗೂ ಕೇಂದ್ರ ಸಮ್ಮತಿಸಿಲ್ಲ. ಎರಡು ಸರಕಾರಗಳ ಜತೆ ಮಾತನಾಡಿ ಕೇಂದ್ರ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಿದೆ",  ಎಂದು ಅವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ