ಬದಾಯುವಿನಿನಲ್ಲಿ ನೇಣು ಹಾಕಲ್ಪಟ್ಟ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿಲ್ಲ!

ಗುರುವಾರ, 21 ಆಗಸ್ಟ್ 2014 (11:19 IST)
ಕಳೆದ ಮೇ ತಿಂಗಳಲ್ಲಿ ಬದಾಯುವಿನಲ್ಲಿ ನಡೆದ ಬಾಲಕಿಯರ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ನಾಟಕೀಯ ತಿರುವು ದೊರೆತಿದ್ದು, ಕೊಲೆಗೈಯ್ಯಲ್ಪಟ್ಟ ಸಹೋದರಿಯರ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಡಿಎನ್‌ಎ ವರದಿ ತಿಳಿಸಿದೆ.

ಸಿಬಿಐನ ಮೂಲಗಳ, ಪ್ರಕಾರ ಹೈದರಾಬಾದ್ ಮೂಲದ ಪ್ರತಿಷ್ಠಿತ ಸೆಂಟರ್ ಫಾರ್ ಫಿಂಗರ್ ಪ್ರಿಂಟಿಂಗ್ ಅಂಡ್ ಡಯಾಗ್ನಸ್ಟಿಕ್ಸ್‌ನಲ್ಲಿ   ಈ ಪ್ರಕರಣದ ಡಿಎನ್ಎ ಪರೀಕ್ಷೆ ಮಾಡಲಾಗಿತ್ತು.  ಅದರಲ್ಲಿ ಬಂದ ಫಲಿತಾಂಶದ ಪ್ರಕಾರ ಬಾಲಕಿಯರನ್ನು ಕೊಲ್ಲುವ ಮೊದಲು ಅವರ ಮೇಲೆ ಲೈಂಗಿಕ ಕೃತ್ಯ ನಡೆದಿಲ್ಲ. 
 
ಈ ವರದಿಯ ನಂತರ ಅನುಮಾನದ ಸೂಜಿ  ಕೊಲೆಗೀಡಾದ ಮಕ್ಕಳ  ಕುಟುಂಬದ ಕಡೆ ತಿರುಗಿದ್ದು, ಇದು ಮರ್ಯಾದಾ ಹತ್ಯೆಯಾಗಿರಬಹುದೆಂಬ ಸಂದೇಹವನ್ನು ತನಿಖಾಧಿಕಾರಿಗಳು ಅಲ್ಲಗಳೆಯುತ್ತಿಲ್ಲ.
 
ಅಲ್ಲದೇ ಆರೋಪಿಗಳು ಮಂಪರು ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಒಂದಕ್ಕೊಂದು ತಾಳೆಯಾಗದಿರುವುದು ಪ್ರಕರಣದಲ್ಲಿ ಮೃತರ ಕುಟುಂಬದವರ ಪಾತ್ರವಿದೆ ಎಂಬ ಸಂದೇಹಕ್ಕೆ ಕಾರಣವಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
 
ಡಿಎನ್ಎ ವರದಿ ಸಾಕಷ್ಟು ಆಧಾರ ಒದಗಿಸಿರುವುದರಿಂದ, ಹೂತಿದ್ದ  ದೇಹಗಳನ್ನು ತೆಗೆದು ಮತ್ತೊಮ್ಮೆ ಶವಪರೀಕ್ಷೆ ನಡೆಸುವ ಅಗತ್ಯ ಕಾಣುತ್ತಿಲ್ಲ ಎಂದು ತಿಳಿಸಿರುವ ಸಿಬಿಐ ಐವರು ಆರೋಪಿಗಳ ಜಾಮೀನು ಅರ್ಜಿಯನ್ನು  ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದಿದೆ. 

ವೆಬ್ದುನಿಯಾವನ್ನು ಓದಿ