ಪಾಕಿಸ್ತಾನ್ ಜಿಂದಾಬಾದ್ ಎಂದರೆ ನಿಮಗೇನು ಸಮಸ್ಯೆ: ಡಿಎಸ್‌ಪಿಗೆ ವಕೀಲರ ಪ್ರಶ್ನೆ

ಸೋಮವಾರ, 22 ಫೆಬ್ರವರಿ 2016 (17:47 IST)
ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದರೆ ನಿಮಗೇನು ಸಮಸ್ಯೆ? ವಕೀಲರೊಬ್ಬರು ಡಿಎಸ್‌ಪಿಗೆ ಕೇಳಿದ ಪ್ರಶ್ನೆ ಇದು. ಇದು ನಡೆದದ್ದು ಪಾಕಿಸ್ತಾನದಲ್ಲಲ್ಲ. ಭಾರತದಲ್ಲೇ ಎನ್ನುವುದು ಆಘಾತಕಾರಿ ವಿಷಯ.
 
ಭೋಪಾಲ್‌ನ ಸಿಜೆಎಂ ನ್ಯಾಯಾಲಯದಲ್ಲಿ ಶಂಕಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಆಪರೇಟಿವ್ ಪರ್ವೇಜ್ ಆಲಂ ಪರ ವಾದಿಸುತ್ತಿದ್ದ ವಕೀಲ ಡಿಎಸ್‌ಪಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರೆ ನಿಮಗೇನು ತೊಂದರೆ ಎಂದು ಡಿಎಸ್‌ಪಿಗೆ ಪ್ರಶ್ನಿಸಿದ್ದಾರೆ. 
 
ಅದಕ್ಕೆ ಡಿಎಸ್‌ಪಿ ಯಾವುದೇ ಸಿದ್ಧಾಂತಗಳನ್ನು ಪ್ರತಿಬಿಂಬಿಸುವ ಘೋಷಣೆಗಳನ್ನು ಕೋರ್ಟ್ ಆವರಣದಲ್ಲಿ ಕೂಗಬಾರದು ಎಂದು ಉತ್ತರಿಸಿದ್ದಾರೆ. 
 
ಶಂಕಿತ ಉಗ್ರ ಪರ್ವೇಜ್ ಆಲಂ ಮೇ 2014ರಲ್ಲಿ ಕೋರ್ಟ್ ಆವರಣದಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ.
 
 

ವೆಬ್ದುನಿಯಾವನ್ನು ಓದಿ