ಮೋದಿ ಕ್ಯಾಬಿನೆಟ್‌‌‌ನಲ್ಲಿ ನಂಬರ್‌ 2 ಯಾರಾಗಿದ್ದಾರೆ?

ಮಂಗಳವಾರ, 8 ಜುಲೈ 2014 (17:44 IST)
ನರೇಂದ್ರ ಮೋದಿ ಕ್ಯಾಬಿನೆಟ್‌‌ನಲ್ಲಿ ನಂಬರ್‌ 2 ಯಾರಾಗಿದ್ದಾರೆ? ಈ ವಿಷಯದ ಕುರಿತು ಚರ್ಚೆ ಪ್ರಾರಂಭವಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಮೋದಿ ನಂತರ ಅರುಣ್ ಜೇಟ್ಲಿ ಅಥವಾ ರಾಜನಾಥ್‌ ಸಿಂಗ್‌ ಎರಡನೇ ಸ್ಥಾನದಲ್ಲಿದ್ದಾರೆಯೇ ? ಎನ್ನುವ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. 
 
ರಾಜನಾಥ್ ಅವರ ಗುಂಪಿನ ಪ್ರಕಾರ ರಾಜನಾಥ್‌ ಸಿಂಗ್ ನಂಬರ್‌ 2 ಆಗಿದ್ದಾರೆ. ಪ್ರಸಕ್ತ ತಿಂಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬ್ರಿಕ್ಸ್‌ ಸಮ್ಮೇಳನದಲ್ಲಿ ಭಾಗವಹಿಸಲು ಬ್ರೆಜಿಲ್‌ಗೆ ತೆರಳಿದ ನಂತರ ಯಾರು ನಂಬರ್ 2 ಎನ್ನುವ ಸತ್ಯ ಬಹಿರಂಗವಾಗಲಿದೆ.
 
ಸಿಂಗ್‌ ಅಫ್ತ ವಲಯದಲ್ಲಿ ಪ್ರಧಾನ ಮಂತ್ರಿ ನಂತರ ಕ್ರಮಾನುಸಾರವಾಗಿ ರಾಜನಾಥ್‌ರವರೆ ನಂಬರ್ 2 ಆಗಿದ್ದಾರೆ. ಮೇ 26 ರಂದು ಪ್ರಮಾಣ ವಚನದ ಸಮಯದಲ್ಲಿ ರಾಜನಾಥ್ ಸಿಂಗ್‌ರವರು ಮೋದಿಯ ಎಡಬಾಗದಲ್ಲಿ ಕುಳಿತಿದ್ದರು. 
 
..........ಇನ್ನು ಇದೆ. ಮುಂದೆ ಓದಿ 
 
 

ಕ್ಯಾಬಿನೆಟ್‌ ನೇಮಕ ಸಮಿತಿಯಲ್ಲಿ ಪ್ರಧಾನ ಮಂತ್ರಿ ಮತ್ತು ರಾಜನಾಥ್ ಸಿಂಗ್ ಇದ್ದಾರೆ. ಜೇಟ್ಲಿ ತಮ್ಮ ಖಾತೆಗಳಾದ ವಿತ್ತ, ಮತ್ತು ರಕ್ಷಣಾ ಮತ್ತು ಕಂಪೆನಿ ವಿಷಯದಲ್ಲಿ ಖುದಾಗಿ ಅಧಿಕಾರಿಗಳನ್ನು ನೇಮಕ  ಮಾಡಿಕೊಳ್ಳುವ ಹಾಗಿಲ್ಲವಾದ್ದರಿಂದ ರಾಜನಾಥ್ ಅವರೇ ನಂಬರ್ 2 ಎಂದು ರಾಜನಾಥ್ ಬೆಂಬಲಿಗರ ವಾದವಾಗಿದೆ.
  
ಪೂರ್ವ ಕ್ಯಾಬಿನೆಟ್‌ ಸಚಿವ ಟಿ ಎಸ್‌ ಆರ್ ಸುಬ್ರಮಣ್ಯರ ಪ್ರಕಾರ " ಕ್ಯಾಬಿನೆಟ್‌‌‌ನಲ್ಲಿ ಯಾರು ಪ್ರಧಾನ ಮಂತ್ರಿಯ ಹತ್ತಿರ ಕುಳಿತುಕೊಳ್ಳುತ್ತಾರೋ ಅವರೇ ನಂಬರ್ 2 ಆಗಿರುತ್ತಾರೆ. ಇದು ಪರಂಪರೆ ಇದೆ. ಈ ಮೂಲಕ ರಾಜನಾಥ್‌ರವರೆ ನಂಬರ್ 2 ಆಗಿದ್ದಾರೆ. ಆದರೆ ಅರುಣ್ ಜೇಟ್ಲಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಧಾನ ಮಂತ್ರಿಯಿಂದ ದೂರದಲ್ಲಿ ಕುಳಿತುಕೊಳ್ಳುತ್ತಾರೆ.
 
ಹಾಗೇನೇ , ಮತ್ತೊಬ್ಬ ಮಾಜಿ ಕ್ಯಾಬಿನೆಟ್‌ ಸಚಿವ ನರೇಶ್ ಚಂದ್ರಾರವರಿಗೆ ಈ ಬಗ್ಗೆ ಕೇಳಿದರೆ " ವ್ಯವಹಾರಿಕತೆ ಮತ್ತು ರಾಜತಾಂತ್ರಿಕ ಜವಾಬ್ದಾರಿ ನೋಡಿದರೆ ಅರುಣ್ ಜೇಟ್ಲಿ ನಂಬರ್ 2 ಆಗಿದ್ದಾರೆ.  ಕ್ಯಾಬಿನೆಟ್‌‌ನಲ್ಲಿ ಪ್ರಧಾನಿ ಹತ್ತಿರ ಕುಳಿತುಕೊಳ್ಳುವವರು ನಂಬರ್ 2 ಆಗಿರುತ್ತಾರೆ ಎಂದೇನು ಇಲ್ಲ ಎಂದು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ