ಆರೆಸ್ಸೆಸ್, ಬಿಜೆಪಿಯವರಿಗೆ ಲವ್ ಪದದ ಅರ್ಥವೇ ಗೊತ್ತಿಲ್ಲ: ಆಜಂ ಖಾನ್ ಲೇವಡಿ

ಬುಧವಾರ, 4 ಮಾರ್ಚ್ 2015 (15:22 IST)
ಆರೆಸ್ಸೆಸ್ ಮತ್ತು ಬಿಜೆಪಿಯವರಿಗೆ ಲವ್ ಪದದ ಅರ್ಧವೇ ಗೊತ್ತಿಲ್ಲ. ಲವ್ ಜಿಹಾದ್ ಹೆಸರಿನಲ್ಲಿ ಮಹಿಳೆ ಮತ್ತು ಪುರುಷರ ಆತ್ಮಿಯ ಸಂಬಂಧಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಆಜಂಖಾನ್ ಲೇವಡಿ ಮಾಡಿದ್ದಾರೆ. 
 
ದೇಶ ಸ್ವಾತಂತ್ರ್ಯವಾದಾಗಿನಿಂದ ಜೀವಂತವಾಗಿಟ್ಟಿದ್ದ ಆರೆಸ್ಸೆಸ್, ಸಂವಿಧಾನದ ಕಾಯ್ದೆ 370ರ ಕುರಿತಂತೆ ಜಮ್ಮು ಕಾಶ್ಮಿರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರೊಂದಿಗೆ ಯಾಕೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಉತ್ತರಪ್ರದೇಶದ ಸಚಿವ ಆಜಂ ಖಾನ್ ಗುಡುಗಿದ್ದಾರೆ.
 
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಮ್ಮು ಕಾಶ್ಮಿರ ರಾಜ್ಯಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ 370 ಕಾಯ್ದೆಯನ್ನು ಗುರಿಯಾಗಿಸಿಕೊಂಡು ಬಂದಿತ್ತು. ಇದೀಗ ಆರೆಸ್ಸೆಸ್ ಪಿಡಿಪಿ ಮುಖ್ಯಸ್ಥ ಮುಫ್ತಿ ಅವರೊಂದಿಗೆ ಯಾವ ಕಾರಣಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದೆ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಸವಾಲ್ ಹಾಕಿದ್ದಾರೆ.  
 
ಸಂವಿಧಾನ 370 ರ ಕಾಯ್ದೆಯಂತೆ ಜಮ್ಮು ಕಾಶ್ಮಿರಕ್ಕೆ ವಿಶೇಷ ಸ್ವಾಯತ್ತತೆ ಹೊಂದುವ ಅಧಿಕಾರವಿರುತ್ತದೆ. ಜಮ್ಮು ಕಾಶ್ಮಿರಕ್ಕೆ ಸಂವಿಧಾನ 370 ರ ಕಾಯ್ದೆ ಜಾರಿಗೊಳಿಸಲು ಅನುಮತಿ ನೀಡಬೇಕು ಎಂದು ನಿರಂತರವಾಗಿ ಪ್ರತಿಭಟನೆಗಳು ನಡೆದಿದ್ದವು.ಆದರೆ, ಆರೆಸ್ಸೆಸ್ ಸಂಪೂರ್ಣವಾಗಿ ವಿರೋಧಿಸಿತ್ತು.
 
ಏತನ್ಮಧ್ಯೆ ಪಿಡಿಪಿ-ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರ ಸಂವಿಧಾನ 370 ಕಾಯ್ದೆ ಕುರಿತಂತೆ ಒಮ್ಮತಕ್ಕೆ ಬರಲು ನಿರ್ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಮರು ಮತಾಂತರ ವಿಷಯವನ್ನು ಎತ್ತಿಕೊಂಡು ದೇಶದ ಶಾಂತಿಯನ್ನು ಕದಡುತ್ತಿವೆ ಎಂದು ಖಾನ್ ಆರೋಪಿಸಿದ್ದಾರೆ.
 
ಕತ್ತಿಯಿಂದ ಬೆದರಿಸಿ ಹಿಂದೂಗಳನ್ನು ಯಾವತ್ತೂ ಇಸ್ಲಾಂಗೆ ಮತಾಂತರ ಮಾಡಲಾಗಿಲ್ಲ.ಮರುಮತಾಂತರ ವಿಷಯದ ಕುರಿತು ಪುಕಾರು ಎಬ್ಬಿಸುತ್ತಿರುವ ವ್ಯಕ್ತಿಗಳು ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಲವ್ ಜಿಹಾದ್ ವಿಷಯದಲ್ಲೂ ಕೂಡಾ ಸತ್ಯಾಂಶವಿಲ್ಲ ಎಂದು ತಳ್ಳಿಹಾಕಿದ್ದಾರೆ.  
 

ವೆಬ್ದುನಿಯಾವನ್ನು ಓದಿ