ಸಾಕ್ಷ್ಯಗಳಿದ್ದರೂ ಸೋನಿಯಾರನ್ನೇಕೆ ಬಂಧಿಸುತ್ತಿಲ್ಲ, ಕೇಜ್ರಿವಾಲ್ ಪ್ರಶ್ನೆ

ಶನಿವಾರ, 30 ಏಪ್ರಿಲ್ 2016 (15:58 IST)
ಅಗಸ್ಟಾ ವೆಸ್ಟಲ್ಯಾಂಡ್ ಹಗರಣ ದೊಡ್ಡ ಮಟ್ಟದಲ್ಲಿ ರಾಜಕೀಯ ಕೋಲಾಹಲವನ್ನು ಹುಟ್ಟಿಸುತ್ತ ಸಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಂಧನಕ್ಕೆ ಒತ್ತಾಯಿಸಿದ್ದಾರೆ. 


ಈ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು ಒಂದು ವೇಳೆ ಸೋನಿಯಾ ಅವರ ಜಾಗದಲ್ಲಿ ನಾನು ಇದ್ದಿದ್ದೇ ಆದರೆ ನನ್ನನ್ನು ಮನೆಯಿಂದ ಎಳೆದು ತರಲಾಗುತ್ತಿತ್ತು ಎಂದು ಹೇಳಿದ್ದಾರೆ. 
 
ಅವರು(ಬಿಜೆಪಿ ಸರ್ಕಾರ) ಯಾಕೆ ಸೋನಿಯಾ ಗಾಂಧಿ ಅವರನ್ನು ಬಂಧಿಸುತ್ತಿಲ್ಲ. ನಾನಾಗಿದ್ದರೆ ಮನೆಯಿಂದ ಎಳೆದು ತರುತ್ತಿದ್ದರು. ರಾಬರ್ಟ್ ವಾದ್ರಾ ಅವರನ್ನು ಯಾಕೆ ಬಂಧಿಸುತ್ತಿಲ್ಲ? ಸೋನಿಯಾ ಮತ್ತು ರಾಬರ್ಟ್ ವಿರುದ್ಧ ಸಾಕ್ಷ್ಯಗಳಿವೆ ಮತ್ತು ಅವರು (ಬಿಜೆಪಿ) ಅಧಿಕಾರದಲ್ಲಿಯೂ ಇದ್ದಾರೆ ಎಂದು ಕೇಜ್ರಿವಾಲ್ ಸವಾಲೆಸೆದಿದ್ದಾರೆ. 
 
ಏತನ್ಮಧ್ಯೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ತಮ್ಮ ಹೇಳಿಕೆಯನ್ನು ಅಳಿಸಿ ಹಾಕಿದ್ದರ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರಲ್ಲದೆ ಸೋನಿಯಾ ಗಾಂಧಿ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ವೆಬ್ದುನಿಯಾವನ್ನು ಓದಿ