ವಿಐಪಿಗಳ ಬಾಡಿಗಾರ್ಡ್ ಗಳು ಕಪ್ಪು ಕನ್ನಡಕ ಧರಿಸುವುದು ಯಾಕೆ ಗೊತ್ತಾ?!

ಬುಧವಾರ, 29 ಮಾರ್ಚ್ 2017 (08:45 IST)
ನವದೆಹಲಿ: ಪ್ರಧಾನಿ ಮೋದಿ ಅಥವಾ ಇತರ ವಿಐಪಿ ಗಣ್ಯರ ಹಿಂದೆ ರಕ್ಷಕರಾಗಿ ನಿಲ್ಲುವ ಬಾಡಿ ಗಾರ್ಡ್ ಗಳು ಸದಾ ಕಪ್ಪು ಕನ್ನಡಕ ಧರಿಸಿರುತ್ತಾರೆ. ಆದರೆ ಯಾಕೆ ಎಂದು ಗೊತ್ತೇ?

 

 
ಅದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಅವರು ವಿಐಪಿಗಳನ್ನು ರಕ್ಷಿಸುವ ಹೊಣೆ ಹೊತ್ತಿರುತ್ತಾರೆ. ಹಾಗಾಗಿ ಸುತ್ತಲೂ ಏನು ನಡೆಯುತ್ತಿದೆ ಎಂದು ನೋಡುತ್ತಿರಬೇಕು. ಆದರೆ ಅವರು ಎತ್ತ ನೋಡುತ್ತಾರೆ ಎನ್ನುವುದು ಸುತ್ತಲಿದ್ದವರಿಗೆ ಗೊತ್ತಾಗಬಾರದು.

 
ಎರಡನೆಯದಾಗಿ ಅವರು ಬಿಸಿಲು, ಗಾಳಿ, ಧೂಳಿನಿಂದ ರಕ್ಷಣೆ ಪಡೆಯಬೇಕೆಂದು ಕಪ್ಪು ಕನ್ನಡಕ ಧರಿಸುತ್ತಾರೆ. ಯಾಕೆಂದರೆ ಈ ರೀತಿಯ ಹವಾಮಾನ ವೈಪರೀತ್ಯದಿಂದಾಗಿ ಅವರ ದೃಷ್ಟಿ ವಿಚಲಿತರಾಗಬಾರದು. ಕರ್ತವ್ಯ ಲೋಪವಾಗಬಾರದು ಎಂಬ ಉದ್ದೇಶದಿಂದ.

 
ಮೂರನೆಯದಾಗಿ ಬಾಂಬ್ ಬ್ಲಾಸ್ಟ್ ಅಥವಾ ಇನ್ನಿತರ ಪ್ರಬಲ ಶಬ್ಧಗಳಿಂದ ಅವರ ದೃಷ್ಟಿ ವಿಚಲಿತವಾಗಬಾರದು ಎಂದಾಗಿರುತ್ತದೆ. ಅಲ್ಲದೆ, ಬಾಡಿಗಾರ್ಡ್ ಗಳು ಮನುಷ್ಯರ ಆಂಗಿಕ ಭಾಷೆಯನ್ನು ಬಲ್ಲವರಾಗಿರುತ್ತಾರೆ. ಹಾಗಾಗಿ ಕನ್ನಡಕದ ಮರೆಯಲ್ಲೇ ವಿಐಪಿಗಳ ಸುತ್ತ ಮುತ್ತಲಿರುವವರು ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ಈ ತಂತ್ರ!

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ