ವಿಚ್ಛೇದನ ನೀಡುವುದಾಗಿ ಪತಿಗೆ ಪತ್ರ ಬರೆದರೆ, ಅದೂ ಕ್ರೌರ್ಯ: ದೆಹಲಿ ಹೈಕೋರ್ಟ್

ಸೋಮವಾರ, 22 ಫೆಬ್ರವರಿ 2016 (15:30 IST)
ತನ್ನ ಪರಿತ್ಯಕ್ತ ಪತ್ನಿಯಿಂದ ವಿಚ್ಛೇದನ ನೀಡುವುದಾಗಿ ಬೆದರಿಕೆ ಪತ್ರ ಪಡೆದಿದ್ದ ಪತಿಗೆ ವಿಚ್ಛೇದನ ಪಡೆಯಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಮಾನಸಿಕ ಸ್ಥೈರ್ಯ ಕುಗ್ಗಿಸುವ ಒಂದು ಪತ್ರ ಕೂಡ ಕ್ರೌರ್ಯತೆಯ ಕೃತ್ಯವಾಗುತ್ತದೆ ಎಂದು ಕೋರ್ಟ್ ಹೇಳಿದೆ. 

ವ್ಯಕ್ತಿಯೊಬ್ಬ ತನ್ನ ಹೆಂಡತಿ 28 ವರ್ಷಗಳಿಂದ ತನ್ನಿಂದ ದೂರವಿರುವ ಬಗ್ಗೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
 
1980ರಲ್ಲಿ ಮದುವೆಯಾಗಿದ್ದ ವ್ಯಕ್ತಿಯೊಬ್ಬ 1987ರಲ್ಲಿ ಆತ ಪತ್ನಿ ಮತ್ತು ಮಗಳನ್ನು ದೇಶದಲ್ಲಿಯೇ ಬಿಟ್ಟು ಅಮೇರಿಕಾಕ್ಕೆ ತೆರಳಿದ್ದ. 
 ಕಳೆದ 28 ವರ್ಷಗಳಿಂದ ಅವರಿಬ್ಬರು ದೂರವಿದ್ದರು. 
 
ತನ್ನ ಗಂಡನಿಗೆ ವಿಚ್ಛೇದನ ನೀಡುವುದಾಗಿ ಬೆದರಿಸಿ ಪತ್ರ ಬರೆದರೇ ಆತ ವಿಚ್ಛೇದನ ನೀಡಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
 
1990ರಲ್ಲಿ ಆತನಿಗೆ ಪತ್ರ ಬರೆದ ಪತ್ನಿ ನಾವಿಬ್ಬರು ವಿಚ್ಛೇದನ ಪಡೆದುಕೊಳ್ಳೋಣ. ನನ್ನ ಹಳೆಯ ಗೆಳೆಯ ನನ್ನನ್ನು ಮದುವೆಯಾಗಲು ಒಪ್ಪಿದ್ದಾನೆ ಮತ್ತು ಮಗಳನ್ನು ಸಹ ತನ್ನ ಪುತ್ರಿಯೆಂದು ಸ್ವೀಕರಿಸಲು ತಯಾರಿದ್ದಾನೆ ಎಂದು ಬರೆದಿದ್ದಳು. 
 
ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ಪತ್ನಿ ಆ ಪತ್ರದಲ್ಲಿ ಯಾವುದೇ ಸತ್ಯಾಂಶವಿರಲಿಲ್ಲ. ನಾನು ಸುಳ್ಳು ಹೇಳಿದ್ದೆ. ವಿದೇಶಕ್ಕೆ ಹೋಗಿಯಾದರೂ ಸರಿ, ಸ್ವದೇಶದಲ್ಲಿಯಾದರೂ ಸರಿ ನಾನು ಗಂಡನ ಜೊತೆ ಬಂದು ಜೀವನ ನಡೆಸಲು ಕಾತರಳಾಗಿದ್ದೇನೆ ಎಂದು ಹೇಳಿದ್ದಳು.
 
ಆದರೆ ಆಕೆಯ ಈ ಮಾತುಗಳನ್ನು ಒಪ್ಪದ ಹೈಕೋರ್ಟ್ ಹೆಂಡತಿಯಿಂದ ಬಂದಿರುವ ಪತ್ರ ಬೆದರಿಕೆಯಿಂದ ಕೂಡಿದೆ. ಈ ಪತ್ರ ಕ್ರೌರ್ಯವನ್ನು ಬಿಂಬಿಸುತ್ತಿದ್ದು, ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಈ ಬೆದರಿಕೆ ಪತ್ರದ ಆಧಾರದ ಮೇಲೆ ಪತಿ ತನ್ನ ಪತ್ನಿಯಿಂದ ವಿಚ್ಛೇದನ ಪಡೆದುಕೊಳ್ಳಬಹುದು ಎಂದು ಹೇಳಿದೆ.
 

ವೆಬ್ದುನಿಯಾವನ್ನು ಓದಿ