ಅಧಿಕಾರಕ್ಕಿಂತ ಸಿದ್ಧಾಂತಗಳಿಗೆ ಆದ್ಯತೆ: ಮೆಹಬೂಬಾ

ಶನಿವಾರ, 6 ಫೆಬ್ರವರಿ 2016 (16:17 IST)
ಸರ್ಕಾರ ರಚನೆ ಕುರಿತಂತೆ ಕಠಿಣ ನಿಲುವು ತೆಗೆದುಕೊಂಡಿರುವ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತರಿ ಕೇಂದ್ರ ಸರ್ಕಾರ ಆತ್ಮವಿಶ್ವಾಸ ವೃದ್ಧಿಸುವ ನಿಟ್ಟಿನಲ್ಲಿ ಉತ್ತಮ ವಾತಾವರಣವನ್ನು ಉಂಟು ಮಾಡುವ ಕ್ರಮಗಳನ್ನು ಘೋಷಿಸದಿದ್ದರೆ ಬಿಜೆಪಿಯೊಂದಿಗಿನ ಮೈತ್ರಿಗೆ ಅಂತ್ಯ ಹಾಡುವುದಾಗಿ ಹೇಳಿದ್ದಾರೆ. 
 

 
ಜಮ್ಮುವಿನಲ್ಲಿ ತಮ್ಮ ಪಕ್ಷದ ಹಿರಿಯ ನಾಯಕರ ಜತೆ ಸಭೆ ನಡೆಸಿದ್ದ ಮೆಹಬೂಬಾ ನಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಹೊಂದಿದ್ದ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಅವರು ಅಧಿಕಾರಕ್ಕಿಂತ ಹೆಚ್ಚಾಗಿ ಸಿದ್ಧಾಂತಗಳಿಗೆ ಆದ್ಯತೆ ನೀಡಿದ್ದಾರೆ. ಅವೀಗ ನಮಗೆ ಮಾರ್ಗದರ್ಶಿ ಕೋಡ್‌ಗಳಾಗಿವೆ ಎಂದು ಹೇಳಿದ್ದಾರೆ. 
 
ಕೇಂದ್ರ ಜಮ್ಮು ಮತ್ತು ಕಾಶ್ಮೀರಕ್ಕೆ ಸಿಬಿಎಂ ಘೋಷಿಸಲು ವಿಫಲವಾದರೆ ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳಲು ಹಿಂಜರಿಕೆ ತೋರುವುದಿಲ್ಲ ಎಂಬ ಸುಳಿವನ್ನು ಸಹ ನೀಡಿರುವ ಅವರು ನನ್ನ ತಂದೆ 55 ವರ್ಷಗಳ ಕಾಲ ರಾಜಕೀಯದಲ್ಲಿದ್ದರು, ಆರೋಗ್ಯಕರ ರಾಜಕೀಯದಲ್ಲಿ ನಂಬಿಕೆ ಇಟ್ಟಿದ್ದರು. ನಾನು ಸಹ ಅಧಿಕಾರ ಮತ್ತು ಸಿದ್ಧಾಂತಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ ನಿಸ್ಸಂದೇಹವಾಗಿಯೂ ಸಿದ್ಧಾಂತಗಳನ್ನೇ ಆಯ್ದುಕೊಳ್ಳುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ