ಶೀನಾ ಬೋರಾ ನನ್ನ ಮಗಳು: ಪ್ರತ್ಯಕ್ಷನಾದ ಸಿದ್ಧಾರ್ಥ್ ದಾಸ್

ಮಂಗಳವಾರ, 1 ಸೆಪ್ಟಂಬರ್ 2015 (11:02 IST)
ದೇಶಾದ್ಯಂತ ಸಂಚಲನವನ್ನು ಮೂಡಿಸಿರುವ ಶೀನಾ ಬೋರಾ ಹತ್ಯೆ ಪ್ರಕರಣ ಹೊಸ ಹೊಸ ಟ್ವಿಸ್ಟ್‌ಗಳನ್ನು ಪಡೆಯುತ್ತ ಸಾಗುತ್ತಿದೆ. ಶೀನಾಳ ತಂದೆಯ ಯಾರು ಎಂಬುದು ಇಲ್ಲಿಯವರೆಗೆ ಬದುದೊಡ್ಡ ಪ್ರಶ್ನೆಯಾಗಿ ಉಳಿದಿತ್ತು. ಇಷ್ಟು ದಿನ ನಾಪತ್ತೆಯಾಗಿದ್ದ ಇಂದ್ರಾಣಿ ಮೊದಲ ಪತಿ ಎನ್ನಲಾದ ಸಿದ್ಧಾರ್ಥ ದಾಸ್ ಈಗ ಪೊಲೀಸರ ಮುಂದೆ ಪ್ರತ್ಯಕ್ಷರಾಗಿದ್ದು ಆಕೆ ತನ್ನ ಮಗಳು. ಡಿಎನ್ಎ ಪರೀಕ್ಷೆಗೂ ತಾನು ಸಿದ್ಧ ಎಂದು ಹೇಳುವುದರ ಮೂಲಕ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದ್ದಾರೆ.

ಶೀನಾ ಮತ್ತು ಮಿಖೈಲ್ ಯಾರ ಮಕ್ಕಳು ಎಂಬುದು ಇಲ್ಲಿಯವರೆಗೆ ದೊಡ್ಡ ಪ್ರಶ್ನೆಯಾಗಿತ್ತು. ಶೀನಾ ಮತ್ತು ಮಿಖೈಲ್ ಇಂದ್ರಾಣಿ ಮೊದಲ ಪತಿ ಸಿದ್ಧಾರ್ಥ ದಾಸ್ ಅಥವಾ ಆತನಿಗಿಂತಲೂ ಮೊದಲು ಇಂದ್ರಾಣಿ ಅನಧಿಕೃತ ಸಂಬಂಧ ಹೊಂದಿದ್ದ ವ್ಯಕ್ತಿಯೊಂದಿಗೆ ಹುಟ್ಟಿದ ಮಕ್ಕಳಿರಬೇಕು ಎಂದು ಊಹಿಸಲಾಗುತ್ತಿತ್ತು. 
 
ಅವರು ನನ್ನ ಮಲ ತಂದೆ ಲೈಂಗಿಕವಾಗಿ ನನ್ನನ್ನು ಬಳಸಿಕೊಂಡ ಪರಿಣಾಮ ಹುಟ್ಟಿದ ಮಕ್ಕಳು ಎಂದು ವಿಚಾರಣೆ ಸಂದರ್ಭದಲ್ಲಿ ಇಂದ್ರಾಣಿ ಹೇಳಿದ್ದಳು ಎಂಬುದಾಗಿ ಪೊಲೀಸರು ಈ ಹಿಂದೆ ತಿಳಿಸಿದ್ದರು. ಹೀಗಾಗಿ  ಅವರಿಬ್ಬರ ನಿಜವಾದ ತಂದೆ ಯಾರು ಎಂಬುದು ಮಾತ್ರ ಸ್ಪಷ್ಟವಾಗಿರಲಿಲ್ಲ. 
 
ಆದರೆ ಶೀನಾ ಮತ್ತು ಶೀನಾ ಬೋರಾ ಮತ್ತು ಮಿಖೈಲ್ ಬೋರಾ, ಸಿದ್ದಾರ್ಥ್ ದಾಸ್ ಮತ್ತು ಇಂದ್ರಾಣಿ ಮುಖರ್ಜಿ ಅವರ ಮಕ್ಕಳು ಎಂದು ಸಿದ್ಧಾರ್ಥ ಅವರ ತಾಯಿ ಕಳೆದೆರಡು ದಿನಗಳ ಹಿಂದೆ ತಿಳಿಸಿದ್ದರು.
 
"ಶೀನಾ ಮತ್ತು ಮಿಖೈಲ್, ಸಿದ್ಧಾರ್ಥ ಮತ್ತು ಇಂದ್ರಾಣಿ ಮಕ್ಕಳು. ಶೀನಾಳ ಮೊದಲ ವರ್ಷದ ಹುಟ್ಟುಹಬ್ಬವನ್ನು ನಮ್ಮ ಮನೆಯಲ್ಲೇ ಆಚರಿಸಲಾಗಿತ್ತು. ಸಿದ್ಧಾರ್ಥ ಮತ್ತು ಇಂದ್ರಾಣಿ ಗೌಹಾಟಿಯಲ್ಲಿ 3 ವರ್ಷ ಜತೆಗಿದ್ದರು. ನಂತರ ಅವರ ಸಂಬಂಧ ಮುರಿದು ಬಿದ್ದಿತು. ಅವನು ಅರುಣಾಚಲ ಪ್ರದೇಶಕ್ಕೆ ಹೋಗಿ ಬೇರೆ ಕೆಲಸದಲ್ಲಿ ತೊಡಗಿದ", ಎಂದು 70ವರ್ಷದ ಸರ್ಕಾರಿ ನೌಕರಿಯಲ್ಲಿದ್ದು ನಿವೃತ್ತರಾಗಿರುವ ಮಾಯಾರಾಣಿ ದಾಸ್ ಹೇಳಿದ್ದರು.
 
ಅದರ ಬೆನ್ನಲ್ಲೇ ತಾನು ಸಿದ್ಧಾರ್ಥ್ ದಾಸ್  ಎಂದು ಹೇಳುತ್ತಿರುವ ವ್ಯಕ್ತಿಯೊಬ್ಬರು ಅವರಿಬ್ಬರು ತಮ್ಮ ಮಕ್ಕಳು ಎಂದು ಒಪ್ಪಿಕೊಂಡಿದ್ದಾರೆ. 
 
ದಾಸ್ ಸದ್ಯ ಉತ್ತರ ಕೋಲ್ಕತ್ತಾದಲ್ಲಿದ್ದು ಅವರೊಂದಿಗೆ ಮಾಧ್ಯಮವೊಂದು ನಡೆಸಿದ ಸಂದರ್ಶನ ಹೀಗಿದೆ:
 
* ಶೀನಾ ಫೆಬ್ರವರಿ 11, 1987ರಲ್ಲಿ ಜನಿಸಿದ್ದಳು.
 
* ಇಂದ್ರಾಣಿ ಮತ್ತು ನಾನು ವಿವಾಹವಾಗಿರಲಿಲ್ಲ. ನಮ್ಮದು ಲೀವ್ ಇನ್ ರಿಲೇಶನ್‌ಶಿಪ್ ಸಂಬಂಧವಾಗಿತ್ತು. ನಾವಿಬ್ಬರು 3 ವರ್ಷ ಜತೆಗಿದ್ದೆವು.
 
*ಬಾಲ್ಯದಿಂದಲೂ ಹಣದ ವ್ಯಾಮೋಹಿಯಾಗಿದ್ದ ಇಂದ್ರಾಣಿ ತನ್ನ ಮಗಳನ್ನು ಕೊಂದಿರುವುದು ಸತ್ಯವೇ ಆಗಿರಬಹುದು.
 
*1989 ರಲ್ಲಿ ಆಕೆ ನನ್ನನ್ನು ತೊರೆದು ಹೋಗಿದ್ದಳು. ಆ ಬಳಿಕ ನಾನು ಆಕೆಯ ಸಂಪರ್ಕಕ್ಕೆ ಪ್ರಯತ್ನಿಸಿದೆ. ಆದರೆ ಆಕೆಯ ಪತ್ತೆ ಹಚ್ಚಲಾಗಲಿಲ್ಲ. 
 
* ನಾನು ಹಣವಂತವಲ್ಲದಿದ್ದರಿಂದ ಆಕೆ ನನ್ನನ್ನು ಮದುವೆಯಾಗಲಿಲ್ಲ.
 
* ನಾನು ಸಾಮಾನ್ಯ ಮನುಷ್ಯ ಮತ್ತು ಅವಳು ಹೈ ಸೊಸೈಟಿಯಿಂದ ಬಂದವಳು. ಹೀಗಾಗಿ ನಾನು ಹಾದಿಯನ್ನು ಬದಲಿಸಿಕೊಂಡೆ 
 
* ಮಗಳ ಸಾವಿನಿಂದ ನನಗೆ ತೀವ್ರ ದುಃಖವಾಗಿದೆ.
 
*ಆಕೆ 10 ನೇ ತರಗತಿಯಲ್ಲಿ ಓದುವಾಗ ನಾನು ಆಕೆಯನ್ನು ಕೊನೆಯ ಬಾರಿ ಭೇಟಿಯಾಗಿದ್ದೆ.
 
*ಅವಕಾಶ ಕೊಟ್ಟರೆ ನಾನು ಇಂದ್ರಾಣಿಯನ್ನು ಎದುರಿಸಲು ಸಿದ್ಧ. ಡಿಎನ್ಎ ಪರೀಕ್ಷೆಗೂ ನಾನು ಸಿದ್ಧ.

*ನನ್ನ ಮಹಳ ಕೊಲೆಗಾರರಿಗೆ  ಗಲ್ಲು ಶಿಕ್ಷೆಯಾಗಬೇಕು

*ಮುಂಬೈ ಪೊಲೀಸರು ನನ್ನನ್ನು ಸಂಪರ್ಕಿಸಿಲ್ಲ.

ವೆಬ್ದುನಿಯಾವನ್ನು ಓದಿ