ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ನೇತೃತ್ವದ ಎಐಡಿಎಂಕೆ ಪಕ್ಷವನ್ನು ಎನ್‌ಡಿಎ ತೆಕ್ಕೆಗೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮುಂದುವರೆಸಿದೆ. ಎಐಡಿಎಂಕೆ ಸಂಸತ್ತಿನಲ್ಲಿ ಒಟ್ಟು 50 ಸಂಸದರನ್ನು ಹೊಂದಿದ್ದು ಅದರಲ್ಲಿ 37 ಜನ ಲೋಕಸಭಾ ಸಂಸದರಾಗಿದ್ದಾರೆ. ಕೆಳಮನೆಯಲ್ಲಿ ಮೂರನೆಯ ದೊಡ್ಡ ಪಕ್ಷದ ಸ್ಥಾನವನ್ನು ಪಡೆದುಕೊಂಡಿರುವ ಎಐಡಿಎಂಕೆಯನ್ನು ತಮ್ಮ ಮಿತ್ರಕೂಟಕ್ಕೆ ಸೇರಿಸಿಕೊಳ್ಳಲು ಜಯಾ ಅವರ ಮನ ಒಲಿಸುವಲ್ಲಿ ತಾವು ಸಫಲಾಗುತ್ತೇವೆ ಎಂಬ ಆಶಯ ಬಿಜೆಪಿಯದು.