2ನೇ ವಿವಾಹದ ಬೆದರಿಕೆಯೊಡ್ಡಿದ ಪತಿಯ ಗುಪ್ತಾಂಗ ಕತ್ತರಿಸಿ ಹಾಕಿದ ಪತ್ನಿ

ಶುಕ್ರವಾರ, 19 ಫೆಬ್ರವರಿ 2016 (14:30 IST)
ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬಳು ಕೋಪದ ಭರದಲ್ಲಿ ಪತಿಯ ಗುಪ್ತಾಂಗವನ್ನು ಕತ್ತರಿಸಿಹಾಕಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಬದುಕುಳಿದಿದ್ದಾನೆ. ಆದರೆ, ಪುರುಷತ್ವಹರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಮಹಿಳೆಯ ವಿರುದ್ಧ ಅಜ್ಮೇರ್‌ನ ಕೇಕಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಕಳೆದ ಕೆಲ ವಾರಗಳಿಂದ ಪತಿ ಮತ್ತು ಪತ್ನಿಯ ಮಧ್ಯೆ ವಿರಸ ಉಂಟಾಗಿದ್ದು ಪ್ರತಿನಿತ್ಯ ಕಿತ್ತಾಟ ಸಾಮಾನ್ಯವಾಗಿತ್ತು. ನೆರೆಹೊರೆಯವರು ಕೂಡಾ ದಂಪತಿಗಳ ಕೂಗಾಟ ಚೀರಾಟಗಳಿಂದ ಬೇಸತ್ತು ಹೋಗಿದ್ದರು ಎನ್ನಲಾಗಿದೆ.
 
ನಮ್ಮದು ಪ್ರೇಮ ವಿವಾಹವಾಗಿದ್ದರೂ ನಮ್ಮಿಬ್ಬರ ನಡುವೆ ಯಾವುದೇ ಪ್ರೀತಿಯಿರಲಿಲ್ಲ. ನನ್ನ ಪತಿ ಪ್ರತಿನಿತ್ಯ ಹಲ್ಲೆ ಮಾಡುವುದಲ್ಲದೇ ಎರಡನೇ ವಿವಾಹವಾಗುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಪತ್ನಿ, ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.  
 
ಪತಿಯ ವರ್ತನೆಯಿಂದ ಬೇಸತ್ತ ಪತ್ನಿ, ನಿನ್ನೆ ರಾತ್ರಿ ಬ್ಲೇಡ್‌ನಿಂದ ಪತಿಯ ಗುಪ್ತಾಂಗ ಕಚಕ್ ಎನ್ನಿಸಿದ್ದಾಳೆ. ನಂತರ ಪತಿಯ ಕೂಗಾಟ ಕೇಳಿದಾಗ  ನೆರೆಹೊರೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ