ಹೊಟ್ಟೆಯಲ್ಲಿದ್ದ ಮಗು ಸಾಯಿಸಿದವಳಿಗೆ 100 ವರ್ಷ ಶಿಕ್ಷೆ

ಶನಿವಾರ, 30 ಏಪ್ರಿಲ್ 2016 (12:50 IST)
ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರಗೆಳೆದು ಕೊಂದ ರಾಕ್ಷಸಿ ಮಹಿಳೆಗೆ ಶಿಂಗ್ಟೌನ್ ನ್ಯಾಯಾಲಯ ಬರೊಬ್ಬರಿ 100 ವರ್ಷ ಶಿಕ್ಷೆ ನೀಡಿದೆ. ಸಂಪೂರ್ಣ ದೇಶವೇ ಈ ಘಟನೆಗೆ ಆಘಾತಗೊಂಡಿದೆ. 

ಅಪರಾಧಿ ಡೇನೆಲ್ ಲೇನ್ ವಿರುದ್ಧ ಕಳೆದ ಫೆಬ್ರವರಿ ತಿಂಗಳಲ್ಲಿ ಕೊಲೆ ಯತ್ನ ಮತ್ತು ಕಾನೂನುಬಾಹಿರ ಗರ್ಭಪಾತ ಸೇರಿದಂತೆ ಏಳು ಪ್ರಕರಣಗಳು ದಾಖಲಾಗಿದ್ದವು. 
 
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಶುಕ್ರವಾರ ಅಂತಿಮ ತೀರ್ಪು ಪ್ರಕಟಿಸಿದ್ದು ಅಪರಾಧಿಗೆ 100 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. 
 
ಅಪರಾಧಿ ಲೇನ್ ಮಾರ್ಚ್ 2015ರ ಒಂದು ದಿನ 7 ತಿಂಗಳ ಗರ್ಭಿಣಿ ಮಿಚೆಲ್ ವಿಲ್ಕಿನ್ಸ್‌ಳನ್ನು ತನ್ನ ಮನೆಗೆ ಕರೆದೊಯ್ದು ವಿಕೃತತೆಯನ್ನು ಮೆರೆದಿದ್ದಳು. ಗರ್ಭಿಣಿಯ ಮೇಲೆ ಮಾರಕವಾಗಿ ಹಲ್ಲೆ ನಡೆಸಿದ್ದ ಭ್ರೂಣವನ್ನು ಕಿತ್ತು ತೆಗೆದಿದ್ದಳು.
 
ಘಟನೆ ನಡೆದ ಸಂಜೆ ಲೇನ್ ಸತ್ತ ಭ್ರೂಣವನ್ನು ಎತ್ತಿಕೊಂಡ ಆಸ್ಪತ್ರೆಗೆ ಬಂದು ನನಗೆ ಗರ್ಭಪಾತವಾಗಿದೆ ಎಂದು ಹೇಳಿದ್ದಾಳೆ. ಆದರೆ ಆಕೆಯ ಕಟ್ಟುಕಥೆಯನ್ನು ವೈದ್ಯರು ನಂಬಿರಲಿಲ್ಲ. ಅದೇ ದಿನ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಅದೃಷ್ಟವಶಾತ್ ದಾಳಿಗೊಳಗಾದ ಗರ್ಭಿಣಿ ಬದುಕಿದ್ದಾಳೆ. 
 
ಮಗು ಇನ್ನು ಹುಟ್ಟಿಲ್ಲವಾದ್ದರಿಂದ ವಕೀಲರು ಲೇನ್ ವಿರುದ್ಧ ಕೊಲೆ ಆರೋಪವನ್ನು ದಾಖಲಿಸಿರಲಿಲ್ಲ. ಆದರೆ ಅಪರಾಧಿ ಲೇನ್ ಪತಿ ಇನ್ನು ಹುಟ್ಟದಿದ್ದ ಮಗು ಅತ್ತ ಶಬ್ಧ ನನಗೆ ಕೇಳಿಸಿತ್ತು ಎಂದಿದ್ದರಿಂದ ಅದು ಕೊಲೆ ಎಂಬು ಸಾಬೀತಾಯಿತು. 
 
ಇದೊಂದು ರಾಕ್ಷಸಿ ಕ್ರೌರ್ಯ, ಕ್ರೂರ, ಆಘಾತಕಾರಿ ಎಂದು ಎಂದು ಬಣ್ಣಿಸಲಾಗುತ್ತಿದ್ದು ಈ ರೀತಿಯ ಕ್ರೌರ್ಯ ನಡೆಯಲು ಸಾಧ್ಯ ಎಂಬುದನ್ನು ಕಲ್ಪಿಸಿಕೊಳ್ಳಲು ಸಹ ಕಷ್ಟವಾಗುತ್ತದೆ ಎಂದು ನ್ಯಾಯಮೂರ್ತಿಗಳ ಆಘಾತ ವ್ಯಕ್ತ ಪಡಿಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ