ಕೋರ್ಟ್ ಆವರಣದೊಳಗೆ ನ್ಯಾಯಾಧೀಶೆ ಮೇಲೆ ವಕೀಲನಿಂದ ಲೈಂಗಿಕ ಕಿರುಕುಳ

ಗುರುವಾರ, 5 ನವೆಂಬರ್ 2015 (17:44 IST)
ದೆಹಲಿಯ ಕರಕರ್ಡೂಮಾ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮಹಿಳಾ ನ್ಯಾಯಾಧೀಶೆಯೊಬ್ಬರು  ಕೋರ್ಟ್ ಆವರಣದೊಳಗೆ ತನ್ನ ಮೇಲೆ ವಕೀಲರೊಬ್ಬರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.

ತನ್ನ ಕ್ಲೈಂಟ್‌ಗೆ ಪರಿಹಾರವನ್ನು ನೀಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಆರೋಪಿ ವಕೀಲ ನ್ಯಾಯಾಧೀಶೆಗೆ ಬೆದರಿಕೆ ಒಡ್ಡಿದ್ದಷ್ಟೇ ಅಲ್ಲದೇ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
 
ಟ್ರಾಫಿಕ್ ನ್ಯಾಯಾಲಯದ ಮುಖ್ಯಸ್ಥೆಯಾಗಿರುವ ಪೀಡಿತರು ಹೇಳುವ ಪ್ರಕಾರ ಅಕ್ಟೋಬರ್ 30 ರಂದು ಈ ಘಟನೆ ನಡೆದಿತ್ತು ಮತ್ತು ಮರುದಿನ ಅವರು ದೂರನ್ನಿತ್ತಿದ್ದಾರೆ. 
 
ಆರೋಪಿ ವಕೀಲರ ವಿರುದ್ಧ 354ಎ (ಇಷ್ಟವಿಲ್ಲದ ಮತ್ತು ಸ್ಪಷ್ಟ ಲೈಂಗಿಕ ಪ್ರಸ್ತಾಪಗಳನ್ನು ಮೂಲಕ ಲೈಂಗಿಕ ಕಿರುಕುಳ),  509 (ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದ ಪದ, ಸೂಚಕ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ.
 
ತಾನು ನಿರಪರಾಧಿ ಎಂದು ವಾದಿಸಿರುವ ಆರೋಪಿ ಇದೆಲ್ಲ ನ್ಯಾಯಾಧೀಶೆ ಹೆಣೆದ ಕಟ್ಟು ಕಥೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ