ಮಹಿಳೆಯ ಘೋರ ಹತ್ಯೆ: ಸಿಬಿಐ ತನಿಖೆಗೆ ಆದೇಶ

ಬುಧವಾರ, 23 ಜುಲೈ 2014 (10:44 IST)
ಮಹಿಳೆಯ ಘೋರ ಹತ್ಯೆ ಘಟನೆ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಎಸ್‌ಜಿಪಿಜಿಐ ಭದ್ರತಾ ಕಾವಲುಗಾರ ರಾಮ್ ಸೇವಕ್ ಯಾದವ್ ಏಕಾಂಗಿಯಾಗಿ ಮಹಿಳೆಯನ್ನು ಕೊಂದಿದ್ದಾನೆ ಎಂಬ ಪೊಲೀಸ್ ವರದಿಯನ್ನು ಮೃತಳ ಕುಟುಂಬ ಅಲ್ಲಗಳೆದಿರುವುದರಿಂದ ಸಿಬಿಐ ತನಿಖೆಗೆ ಆದೇಶಿಸಲಾಯಿತು.
 
ಕಳೆದ ಜುಲೈ 17ರಂದು ಲಕ್ನೋದ ಮೋಹನ್‌ಲಾಲ್ ಗಂಜ್ ಪ್ರದೇಶದಲ್ಲಿ ಮಹಿಳೆಯ ದೇಹ ಪತ್ತೆಯಾದಾಗ ಭೀಕರ ಹತ್ಯೆ ಬೆಳಕಿಗೆ ಬಂದಿತ್ತು. ಈ ಹತ್ಯೆಯಲ್ಲಿ ಒಂದಕ್ಕಿಂತ ಹೆಚ್ಚು ಜನರು ಭಾಗಿಯಾಗಿದ್ದು ಕಂಡುಬಂದಿರುವುದಾಗಿ ಪೊಲೀಸರು ಆರಂಭದಲ್ಲಿ ತಿಳಿಸಿದ್ದರು. ನಂತರ ಸೆಕ್ಯೂರಿಟಿ ಗಾರ್ಡ್ ಮಾತ್ರ ಈ ಅಪರಾಧ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಪ್ರತಿಪಾದಿಸಿದ್ದರು.

ಅತ್ಯಾಚಾರ ಯತ್ನ ವಿಫಲಗೊಂಡ ಬಳಿಕ ಸೆಕ್ಯೂರಿಟಿ ಗಾರ್ಡ್ ಮಹಿಳೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದನೆಂದು ಪೊಲೀಸರು ಹೇಳಿದ್ದರು. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಭೇಟಿ ನೀಡುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಮಾಡಿರುವ ಪ್ರದೇಶದಲ್ಲಿ ಈ ಘಟನೆ ಜರುಗಿರುವುದರಿಂದ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ಕೇಳಿಬಂದಿದೆ. woman, cbi ,  ಮಹಿಳೆ ಹತ್ಯೆ, ಸಿಬಿಐ ತನಿಖೆ 
 

ವೆಬ್ದುನಿಯಾವನ್ನು ಓದಿ