ಚಲಿಸುತ್ತಿರುವ ಬಸ್‌ನಲ್ಲಿ ಚಾಲಕ, ನಿರ್ವಾಹಕನಿಂದ ಗ್ಯಾಂಗ್‌ರೇಪ್

ಶುಕ್ರವಾರ, 30 ಜನವರಿ 2015 (13:20 IST)
ಚಲಿಸುತ್ತಿರುವ ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ 36 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ  ರಾಜಸ್ಥಾನದಲ್ಲಿ ನಡೆದಿದೆ. 
 
ಪಿಲಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೀಡಿತ ಮಹಿಳೆ ಸ್ಲೀಪರ್ ಬಸ್‌ನಲ್ಲಿ ಪಿಲಾನಿಯಿಂದ ಹರಿಯಾಣಾದ ಲೋಹರುಗೆ ಪ್ರಯಾಣ ಬೆಳೆಸಿದ್ದಳು. ಆಕೆ ಬಸ್‌ನಲ್ಲಿ ಒಬ್ಬಳೇ ಇದ್ದಳು ಎಂದು ತಿಳಿದು ಬಂದಿದೆ.  
 
ಏಕಾಂಗಿಯಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನನ್ನ ಮೇಲೆ ಬಸ್ ನಿರ್ವಾಹಕ  ಕಾಲಿಯಾ( 36) ಅತ್ಯಾಚಾರವೆಸಗಿದ. ನಂತರ ಟಾಲಕ ಸಹ ಅತ್ಯಾಚಾರವೆಸಗಿದ. ನಂತರ ಅವರು ನನ್ನನ್ನು ಅಜ್ಞಾತ ಸ್ಥಳವೊಂದರಲ್ಲಿ ಬಿಟ್ಟರು ಎಂದು ಎಂದು ಪೀಡಿತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. 
 
ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅವರಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ