ಇಬ್ಬರು ಕಾಮುಕರಿಂದ ಮಹಿಳೆಯ ಮೇಲೆ ಕಾರಿನಲ್ಲಿಯೇ ಅತ್ಯಾಚಾರ

ಬುಧವಾರ, 1 ಏಪ್ರಿಲ್ 2015 (16:02 IST)
ನಗರದ ಸಬ್ಜಿಮಂಡಿ ಪ್ರದೇಶದಲ್ಲಿ ಇಬ್ಬರು ಯುವಕರು 25 ವರ್ಷ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರವೆಸಗಿದ ಹೀನಾಯ ಘಟನೆ ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ರಾಜೌರಿ ಗಾರ್ಡನ್ ಪ್ರದೇಶದಲ್ಲಿರುವ ಮಾಲ್‌ನ ಸೇಲ್ಸ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯವತಿಗೆ ಆರೋಪಿಗಳಾದ ವಿಪಿನ್ ಮತ್ತು ಮನೋಜ್ ಕಳೆದೊಂದು ತಿಂಗಳಿನಿಂದ ಪರಿಚಯವಾಗಿದ್ದರು ಎನ್ನಲಾಗಿದೆ.

ಕಳೆದ 2002ರಲ್ಲಿ ವಿವಾಹವಾಗಿದ್ದ ಮಹಿಳೆ ಗಂಡನಿಂದ ದೂರವಾಗಿ ತನ್ನ ಮೂವರು ಮಕ್ಕಳೊಂದಿಗೆ ಸಬ್ಜಿಮಂಡಿ ಪ್ರದೇಶದಲ್ಲಿ ವಾಸವಾಗಿದ್ದಳು. ಘಟನೆ ನಡೆದ ರಾತ್ರಿ ಆರೋಪಿ ವಿಪಿನ್ ಆಕೆಗೆ ಮೊಬೈಲ್ ಕರೆ ಮಾಡಿ, ಮನೆಯ ಹೊರಗಡೆ ತಾನು ನಿಂತಿದ್ದು ಹೊರಗೆ  ಬರುವಂತೆ ಒತ್ತಾಯಿಸಿದ್ದಾನೆ. ಮನೆಯಿಂದ ಹೊರಬಂದ ಮಹಿಳೆ, ಮನೆಯ ಮುಂದೆ ನಿಂತಿದ್ದ ಕಾರಿನಲ್ಲಿ ವಿಪಿನ್ ಜೊತೆಗೆ ಆತನ ಸಹೋದರ ಮನೋಜ್ ಕೂಡಾ ಇರುವುದು ಕಂಡುಬಂದಿದೆ.     

ಇಬ್ಬರು ಆರೋಪಿಗಳು ಬಿಯರ್ ಕುಡಿಯುವಂತೆ ಮಹಿಳೆಗೆ ಆಹ್ವಾನ ನೀಡಿದ್ದಾರೆ. ಮೂವರು ಬಿಯರ್ ಸೇವನೆ ಮಾಡಿದ ನಂತರ ಬಾರ್‌ಗೆ ತೆರಳಿ ಮತ್ತಷ್ಟು ಬಿಯರ್ ತೆಗೆದುಕೊಂಡ ಆರೋಪಿಗಳು, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರಿನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳು ಘಾಂಟಾಘರ್‌ ಬಳಿ ದಾಬಾ ನಡೆಸುತ್ತಿದ್ದಾರೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ