ಮೇವಾತ್‌ನ ಎಸ್‌ಹೆಚ್‌ಕೆಎಮ್ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಲ್ಲಿ ಒಬ್ಬ ಆಸ್ಪತ್ರೆಯ ವಾರ್ಡ್ ಬಾಯ್, ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ಎಂದು ಗುರುತಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾರೊಬ್ಬರನ್ನು ಬಂಧಿಸಿಲ್ಲ.
ಮಹಿಳೆ ಆಸ್ಪತ್ರೆಯ 5 ನೇ ಮಹಡಿಯಲ್ಲಿನ ವಾರ್ಡ್ ನಂಬರ್ 17ರಲ್ಲಿ ದಾಖಲಾಗಿದ್ದಳು. ರಾತ್ರಿ 11.30ಕ್ಕೆ ವಾರ್ಡ್ ಬಾಯ್ ಆಕೆಯನ್ನು ಕೋಣೆಯಿಂದ ಹೊರಕ್ಕೆ ಕರೆದಿದ್ದಾನೆ. ಆಕೆ ವಾರ್ಡ್‌ನಿಂದ ಹೊರಕ್ಕೆ ಬಂದು ತನ್ನ ಸಂಬಂಧಿಕರು ಇದ್ದ ಕೋಣೆಯ ಕಡೆ ಸಾಗುತ್ತಿದ್ದಂತೆ ವಾರ್ಡ್ ಬಾಯ್ ಆಕೆಯನ್ನು ಖಾಲಿ ಕೋಣೆಯೊಂದಕ್ಕೆ ಎಳೆದೊಯ್ದಿದ್ದಾನೆ. ಮೊದಲೇ ಅಲ್ಲಿ ಕಾದು ನಿಂತಿದ್ದ ಸೆಕ್ಯುರಿಟಿ ಗಾರ್ಡ್ ಸಹ ಆತನ ಜತೆ ಸೇರಿಕೊಂಡಿದ್ದು ಇಬ್ಬರು ಸೇರಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಸುಮಾರು ಒಂದು ಗಂಟೆ ಸುಮಾರಿಗೆ ಪೀಡಿತಳ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ಶೋಧವನ್ನು ಆರಂಭಿಸಲಾಗಿದೆ.