ಹೋಳಿ ಹಬ್ಬದಂದು ಸೆಕ್ಸ್‌ಗಾಗಿ ಒತ್ತಾಯಿಸಿದ ಪತಿಯ ಗುಪ್ತಾಂಗಕ್ಕೆ ಕತ್ತರಿ ಹಾಕಿದ ಪತ್ನಿ

ಶುಕ್ರವಾರ, 25 ಮಾರ್ಚ್ 2016 (15:39 IST)
ಹೋಳಿ ಹಬ್ಬದಂದು ಕುಡಿದ ಮತ್ತಿನಲ್ಲಿದ್ದ ಪತಿ ಮಹಾಶಯನೊಬ್ಬ ಸೆಕ್ಸ್‌ಗಾಗಿ ಒತ್ತಾಯಿಸಿದಾಗ ಅದನ್ನು ವಿರೋಧಿಸಿದ ಪತ್ನಿ, ಹರಿತವಾದ ಆಯುಧದಿಂದ ಆತನ ಗುಪ್ತಾಂಗವನ್ನು ಕಟ್ ಮಾಡಿ ಬಿಸಾಕಿದ್ದಾಳೆ.  
 
ವ್ಯಕ್ತಿ ನೋವಿನಿಂದ ಜೋರಾಗಿ ಕೂಗುತ್ತಿರುವುದನ್ನು ಕಂಡ ನೆರೆಹೊರೆಯವರು ಆತನ ಮನೆಗೆ ಧಾವಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ವೈದ್ಯರು ಹರಸಾಹಸ ಪಟ್ಟು ಗುಪ್ತಾಂಗವನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಚಿಕಿತ್ಸೆಯಿಂದ ಚೇತರಿಸಿಕೊಂಡ ಪತಿ ಮಹಾಶಯ, ಚೋಲಾಪುರ್ ಪೊಲೀಸ್ ಠಾಣೆಗೆ ತೆರಳಿ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಪತ್ನಿಯ ಕುಟುಂಬದವರು ಮತ್ತು ಗ್ರಾಮದ ಮುಖ್ಯಸ್ಥ ಕೂಡಾ ಪೊಲೀಸ್ ಠಾಣೆಯಲ್ಲಿ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.
 
ಮತ್ತೊಮ್ಮೆ ಮದ್ಯ ಸೇವಿಸುವುದಿಲ್ಲ ಎಂದು ಪತಿಮಹಾಶಯನಿಂದ ಪ್ರತಿಜ್ಞೆ ಪಡೆದ ಗ್ರಾಮದ ಮುಖ್ಯಸ್ಥ, ದಂಪತಿಗಳು ಗ್ರಾಮಕ್ಕೆ ಮರಳುವಂತೆ ಸಲಹೆ ನೀಡಿದ್ದಾನೆ.

ವೆಬ್ದುನಿಯಾವನ್ನು ಓದಿ