ಐಎಎಸ್ ತರಬೇತಿ ಪಡೆಯಲು ನಕಲಿ ಗುರುತಿನ ಚೀಟಿ ಬಳಸಿದ ಮಹಿಳೆ

ಬುಧವಾರ, 1 ಏಪ್ರಿಲ್ 2015 (17:44 IST)
ತಾನು ಐಎಎಸ್ ಅಧಿಕಾರಿ ಮತ್ತು ಗ್ರಂಥಾಲಯದ ಸಹಾಯಕಿ ಎಂದು ನಟಿಸುತ್ತ ಮಹಿಳೆಯೊಬ್ಬಳು ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್‌ಮಿನಿಸ್ಟ್ರೇಶನ್‌ ಮಸ್ಸೂರಿಯಲ್ಲಿ ತಂಗಿದ್ದ ಘಟನೆ ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ. ನೈನಿತಾಲ್ ಜಿಲ್ಲಾ ಪ್ರಾಧಿಕಾರದಿಂದ ನೀಡಲ್ಪಟ್ಟಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಗುರುತಿನ ನಕಲಿ ಚೀಟಿಯನ್ನು ಬಳಸಿಕೊಂಡು ಆಕೆ ಈ ವಂಚನಾ ಕೆಲಸಕ್ಕೆ ಕೈ ಹಾಕಿದ್ದಾಳೆ ಎಂದು ತಿಳಿದು ಬಂದಿದೆ. 

ತಾನು ಮಾಡುತ್ತಿದ್ದ ಮೋಸ ಬೆಳಕಿಗೆ ಬರುತ್ತಿದ್ದಂತೆ ಸ್ಥಳದಿಂದ ಆಕೆ ನಾಪತ್ತೆಯಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
ಗಂಭೀರ ಭದ್ರತಾ ಲೋಪ ಪತ್ತೆಯಾದ ತಕ್ಷಣ ದೂರು ದಾಖಲಿಸಿಲಾಗಿದೆ. ಎಫ್ಐಆರ್ ಪ್ರಕಾರ, ಮಹಿಳೆ ಎಲ್‌ಬಿಎಸ್ಎನ್ಎಎ ಕಾವಲುಗಾರರ ಕೊಠಡಿಯಲ್ಲಿ ತಂಗಿದ್ದಳು.
 
"ಭದ್ರತಾ ಸಿಬ್ಬಂದಿಯ ಕೊಠಡಿಯಲ್ಲಿ ತಂಗಿದ್ದ ಆಕೆ ಕೆಲವೊಮ್ಮೆ ಒಂದು ಗ್ರಂಥಾಲಯದ ಕೆಲಸಗಾರಳಂತೆ ಮತ್ತು ಕೆಲವೊಮ್ಮೆ  ತರಬೇತಿ ನಿರತ ಐಎಎಸ್ ಅಧಿಕಾರಿಯಂತೆ ನಟಿಸುತ್ತಿದ್ದಳು . ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ತನಿಖೆ ಪ್ರಾರಂಭಿಸಲಾಗಿದೆ,"ಎಂದು ಪೊಲೀಸ್ ಅಧಿಕಾರಿ ಎಚ್‌ಎಚ್ ಭಂಡಾರಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ