ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವ ಮಹಿಳೆಗೆ ಕಠಿಣ ಶಿಕ್ಷೆ: ಕೋರ್ಟ್

ಬುಧವಾರ, 28 ಜನವರಿ 2015 (18:21 IST)
ನ್ಯಾಯಾಲಯಗಳಲ್ಲಿ ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುವ ಮಹಿಳೆಯರಿಗೆ ಕಠಿಣೆ ಶಿಕ್ಷೆ ನೀಡುವುದು ಸೂಕ್ತ ಎಂದು ದೆಹಲಿ ಕೋರ್ಟ್ ಅಭಿಪ್ರಾಯಪಟ್ಟಿದೆ.  
 
ಪುರುಷರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುವ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ರೇಪ್ ಪ್ರಕರಣ ಎದುರಿಸುತ್ತಿರುವ ಪುರುಷ ನಿರ್ದೋಷಿಯಾಗಿ ಹೊರಬಂದರೂ ಸಮಾಜ ಅವರನ್ನು ಕೀಳಾಗಿ ನೋಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. 
 
ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾದಾಗ ಮಾನಸಿಕವಾಗಿ ಖಿನ್ನತೆಯ ಜೊತೆಗೆ ದೈಹಿಕ ನೋವನ್ನು ಅನುಭವಿಸುತ್ತಾಳೆ. ಅದರಂತೆ ಸುಳ್ಳು ರೇಪ್ ಪ್ರಕರಣ ದಾಖಲುಗೊಂಡ ಆರೋಪಿಗೆ ಕೂಡಾ ಅದರಂತೆಯೇ ಮಾನಸಿಕವಾಗಿ ಖಿನ್ನತೆ ಮತ್ತು ಸಮಾಜದ ಕ್ರೂರ ನೋಟವನ್ನು ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ. 
 

ವೆಬ್ದುನಿಯಾವನ್ನು ಓದಿ